ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಶಿವಕುಮಾರ್‌ಗೆ ವಿವಾದದಿಂದ ಅನನುಕೂಲ: ಕೆ.ಎನ್. ರಾಜಣ್ಣ

Published:
Updated:
Prajavani

ತುಮಕೂರು: ‘ರಾಜಕಾರಣದಲ್ಲಿ ಕೆಲವೊಮ್ಮೆ ವಿವಾದ (ಕಾಂಟ್ರವರ್ಸಿ) ಎಂಬುದು ಅನುಕೂಲವೂ ಆಗುತ್ತೆ, ಅನನುಕೂಲವೂ ಆಗುತ್ತದೆ. ವಿವಾದಾತ್ಮಕ ವ್ಯಕ್ತಿಯಾದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಅದರಿಂದ ಅನನುಕೂಲವಾಗಿದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಶಿವಕುಮಾರ್ ಅವರೊಬ್ಬ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. ಅವರ ಕುರಿತ ಪ್ರಕರಣ ಈಗ ಕೋರ್ಟ್‌ ಪರಿಧಿಯಲ್ಲಿರುವುದರಿಂದ ಹೆಚ್ಚಿಗೆ ಮಾತನಾಡಲು ಆಗುವುದಿಲ್ಲ’ ಎಂದರು.

‘ಕೆಲವರು ರಾಜಕೀಯ ಪ್ರೇರಿತ ಅಂತಾರೆ. ಇನ್ನೂ ಕೆಲವರು ಉಪ್ಪು ತಿಂದವರು ನೀರು ಕುಡಿಯಲಿ ಅಂತಾರೆ. ಶಿವಕುಮಾರ್ ನನ್ನ ಆತ್ಮೀಯ ವ್ಯಕ್ತಿ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ’ ಎಂದು ತಿಳಿಸಿದರು.

'ಸವದಿ ಅಂಥಾ ವ್ಯಕ್ತಿಯಲ್ಲ: ಲಕ್ಷ್ಮಣ ಸವದಿ ಉತ್ತಮ ವ್ಯಕ್ತಿಯಾಗಿದ್ದು, ರೋಲ್ ಮಾಡುವಾಗ ವಿಡಿಯೊ ಬಂದಿರಬಹುದು. ಆದರೆ, ಪದೇ ಪದೇ ಅವರನ್ನು ಬ್ಲೂ ಫಿಲಂ ನೋಡಿದವರು ಎಂದು ಹೇಳೋದು ಸರಿಯಲ್ಲ. ಅವರಿಗೆ ಮಕ್ಕಳು, ಮೊಮ್ಮಕ್ಕಳೂ ಇದ್ದಾರೆ’ ಎಂದು ರಾಜಣ್ಣ ಹೇಳಿದರು.

'ಈ ವಿಷಯವಾಗಿ ಸಿದ್ಧರಾಮಯ್ಯನವರೇ ಟೀಕೆ ಮಾಡಲಿ. ಯಾರೇ ಮಾಡಲಿ. ಅದು ಸರಿಯಲ್ಲ' ಎಂದು ತಿಳಿಸಿದರು.

Post Comments (+)