ಗುಬ್ಬಿ: ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಬಳಿ ಶುಕ್ರವಾರ ಹೇಮಾವತಿ ನಾಲೆಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೊಹ್ಮದ್ ನಯೀಮ್ (7), ಮಿಸ್ಬಾ ಬಾನು (9) ಮೃತರು. ನಾಲೆಗೆ ಬಿದ್ದಿದ್ದ ಮತ್ತೊಬ್ಬ ಬಾಲಕ ಮೊಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ ಶಾಲೆ ಮುಗಿಸಿ ಮನೆಗೆ ಬಂದ ನಂತರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ನಾಲೆಯ ಬಳಿ ಆಟವಾಡಲು ಹೋಗಿದ್ದರು. ಆಕಸ್ಮಿವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳನ್ನು ನೋಡಿ ಇಬ್ಬರನ್ನು ಹೊರ ತೆಗೆದಿದ್ದಾರೆ. ಅಷ್ಟರಲ್ಲಾಗಲೇ ಮೊಹ್ಮದ್ ನಯೀಮ್ ಮೃತಪಟ್ಟಿದ್ದ.
ಬಾಲಕಿ ಮಿಸ್ಬಾ ಬಾನು (9) ಹೇರೂರಿನ ಬಳಿ ಶವವಾಗಿ ಪತ್ತೆಯಾಗಿದ್ದಾಳೆ.