ಪಾವಗಡ: ಚಿರತೆಯ ಮೃತ ದೇಹ ತಾಲ್ಲೂಕಿನ ವೈ.ಎನ್.ಹೊಸಕೋಟೆ ಬಳಿ ಮಂಗಳವಾರ ಪತ್ತೆಯಾಗಿದ್ದು, ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ವೈ.ಎನ್.ಹೊಸಕೋಟೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಹೆಣ್ಣು ಚಿರತೆಯ ವಯಸ್ಸು ಸುಮಾರು 2ರಿಂದ 3 ವರ್ಷ ಎಂದು ಅಂದಾಜಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿರತೆಯ ಅವಯವದ ಮಾದರಿಯನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ರವಾನಿಸಲಾಗಿದೆ. ಬೇರೆಲ್ಲೋ ಸತ್ತಿರುವ ಚಿರತೆಯ ದೇಹವನ್ನು ಇಲ್ಲಿ ಎಸೆದಿರಬಹುದು ಎಂದು ಅರಣ್ಯಾಧಿಕಾರಿ ಎಚ್ .ರಾಮಮೂರ್ತಿ ತಿಳಿಸಿದರು.