ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ: ಭಾರತ್‌ ಅಕ್ಕಿ ಮಾರಾಟಕ್ಕೆ ಚಾಲನೆ

Published 7 ಮಾರ್ಚ್ 2024, 14:13 IST
Last Updated 7 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ಬ್ರಹ್ಮಾವರ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಭಾರತ್ ಅಕ್ಕಿ ಮಾರಾಟಕ್ಕೆ ಬ್ರಹ್ಮಾವರ ಸಂತೆ ಮಾರ್ಕೆಟ್ ಬಳಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೇಂದ್ರ ಸರ್ಕಾರದ ಸಬ್ಸಿಡಿ ದರದಲ್ಲಿ ಪ್ರತಿ ಕೆ.ಜಿಗೆ ₹29ರಂತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ಭಾಗದಲ್ಲಿ ಭಾರತ್ ಅಕ್ಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ರಾಜೀವ ಕುಲಾಲ, ಜಿಲ್ಲಾ ಪ್ರಮುಖರಾದ ಕುತ್ಯಾರು ನವೀನ ಶೆಟ್ಟಿ, ರೇಷ್ಮಾ ಉದಯಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಕಿರಣ್ ಕುಮಾರ್, ಶಿಲ್ಪಾ ಜಿ ಸುವರ್ಣ, ಸಂಧ್ಯಾ ರಮೇಶ, ವೀಣಾ ವಿ ನಾಯ್ಕ, ನಳಿನಿ ಪ್ರದೀಪ ರಾವ್, ಪ್ರಥ್ವೀರಾಜ್ ಬಿಲ್ಲಾಡಿ, ಪ್ರಮುಖರಾದ ನಿಶಾನ್ ರೈ, ರವಿ ಶೆಟ್ಟಿ ಕುಂಬ್ರಗೊಡು, ಜ್ಞಾನ ವಸಂತ ಶೆಟ್ಟಿ, ರಘುಪತಿ ಬ್ರಹ್ಮಾವರ, ಸಚಿನ್ ಪೂಜಾರಿ, ದೇವಾನಂದ ವಾರಂಬಳ್ಳಿ, ಅರ್ಜುನ್ ಪ್ರಭು, ಗಣೇಶ ಕುಲಾಲ, ರಾಘವೇಂದ್ರ ಕುಂದರ್, ಮನೋಜ ಶೆಟ್ಟಿ, ಗೌತಮ, ಸಚಿನ್‌ ಕುಕ್ಕುಡೆ, ಜಯಂತಿ ವಾಸುದೇವ, ಶೋಭಾ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT