ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆದರ್ ಬಾಲ್ ಮಹಿಳಾ ಕ್ರಿಕೆಟ್: ಮೈಸೂರಿನ ಬೌಲ್ಔಟ್ ‘ಬಿ’ ಪ್ರಥ

Published 4 ಮೇ 2024, 14:00 IST
Last Updated 4 ಮೇ 2024, 14:00 IST
ಅಕ್ಷರ ಗಾತ್ರ

ಬ್ರಹ್ಮಾವರ: ಇಲ್ಲಿನ ಎಸ್‌ಎಂಎಸ್‌ ಕ್ರೀಡಾಂಗಣದಲ್ಲಿ ಓಎಸ್‌ಸಿ ಎಜುಕೇಷನಲ್ ಸೊಸೈಟಿ ಆಶ್ರಯದಲ್ಲಿ ನಡೆದ ಲೆದರ್ ಬಾಲ್ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರಿನ ಬೌಲ್ ಔಟ್ ‘ಬಿ’ ತಂಡ ಬೌಲ್ ಔಟ್ ‘ಎ’ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಗಳಿಸಿತು.

ಬ್ರಹ್ಮಾವರ ಎಸ್‌ಎಂಎಸ್ ಟೈಗರ್ಸ್ ತಂಡ ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ತೃತೀಯ ಸ್ಥಾನ ಪಡೆಯಿತು. ಅತ್ಯುತ್ತಮ ಆಟಗಾರ್ತಿಯಾಗಿ ಬೌಲ್ ಔಟ್ ಬಿ ತಂಡದ ಯಾಶಿಕ ಗೌಡ, ಅತ್ಯುತ್ತಮ ಎಸೆತಗಾರ್ತಿಯಾಗಿ ಬೌಲ್ ಔಟ್ ಎ ತಂಡದ ವಿದ್ಯಾ, ಅತ್ಯುತ್ತಮ ಬ್ಯಾಟರ್ ಆಗಿ ಬೌಲ್ ಔಟ್ ಬಿ ತಂಡದ ಯಾಶಿಕಾ ಗೌಡ, ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಎಸ್‌ಎಂಎಸ್ ಟೈಗರ್ಸ್ ತಂಡದ ರಚಿತಾ ಹತ್ವಾರ್, ಅತ್ಯುತ್ತಮ ಯುವ ಆಟಗಾರ್ತಿಯಾಗಿ ಎಸ್‌ಎಂಎಸ್ ಟೈಗರ್ಸ್ ತಂಡದ ಕುಸುಮ ಎನ್.ಗೌಡ ಪ್ರಶಸ್ತಿ ಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ಎಸ್‌ಎಂಎಸ್‌ ಕ್ರಿಕೆಟ್ ಕ್ಲಬ್‌ನಿಂದ ಕರ್ನಾಟಕ ರಾಜ್ಯ 15 ವರ್ಷ ವಯೋಮಿತಿಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಯ್ಕೆಗೊಂಡ ರಚಿತಾ ಹತ್ವಾರ್, ಚಿತ್ರಾ, ಕಾಲೇಜು ವಿಭಾಗದಿಂದ ಅಂತರ್‌ ವಿಶ್ವವಿದ್ಯಾಲಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು, ಪ್ರೌಢಶಿಕ್ಷಣ ಇಲಾಖೆಯಿಂದ ರಾಷ್ಟ್ರಮಟ್ಟದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಒಎಸ್‌ಸಿ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಫಾ.ಎಂ.ಸಿ ಮಥಾಯ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲನ್ ರೋಹನ್ ವಾಜ್, ಕಾಲೇಜು ವಿಭಾಗದ ಕಾರ್ಯದರ್ಶಿ ಅಲ್ವರಿಸ್ ಡಿಸಿಲ್ವ, ಖಜಾಂಚಿ ಜಾಯ್ಸನ್ ರೊಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹೆರಿಕ್ ಡಿಸೋಜ, ಸದಸ್ಯರಾದ ಆಲ್ಬರ್ಟ್ ರೊನಿ ಡಿಸಿಲ್ವ, ಎಸ್‌ಎಂಎಸ್ ಚರ್ಚ್ ಟ್ರಸ್ಟಿ ಮಿಲ್ಟನ್ ಒಲಿವೆರ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿರ್ತಿ ರಾಜೇಶ ಶೆಟ್ಟಿ, ಎಸ್‌ಬಿಐ ಸಿಬ್ಬಂದಿ ಶ್ಯಾಮರಾಜ ಬಿರ್ತಿ, ಪ್ರಾಂಶುಪಾಲ ಮಂಜುನಾಥ ಉಡುಪ ಕೆ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಐವನ್ ಡಿ ಸುವಾರಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT