ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | 281 ಮಂದಿಗೆ ಕೋವಿಡ್‌ ಸೋಂಕು

ದಿಢೀರ್ ಏರಿಕೆಯಾದ ಸೋಂಕಿತ ಪ್ರಕರಣ: ಒಂದೇ ದಿನ ದಾಖಲಾದ ಗರಿಷ್ಠ ಸೋಂಕು
Last Updated 23 ಜುಲೈ 2020, 5:33 IST
ಅಕ್ಷರ ಗಾತ್ರ

ಉಡುಪಿ: ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚು ಕೋವಿಡ್‌ ಸೋಂಕಿತ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ದೃಢಪಟ್ಟಿವೆ.ಬುಧವಾರ 281 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತ‌ಂಕ ಸೃಷ್ಟಿಯಾಗಿದೆ.

ಸೋಂಕಿತರಲ್ಲಿ 160 ಪುರುಷರು, 100 ಮಹಿಳೆಯರು ಹಾಗೂ 20 ಮಕ್ಕಳು ಇದ್ದಾರೆ. ರೋಗ ಲಕ್ಷಣಗಳು ಇದ್ದವರನ್ನು ಕೋವಿಡ್‌ ಆಸ್ಪತ್ರೆಗಳಿಗೆ ಹಾಗೂ ಲಕ್ಷಣಗಳಿಲ್ಲದ 395 ಮಂದಿಯನ್ನು ಹೋಂ ಐಸೊಲೇಷನ್‌ನಲ್ಲಿರಿಸಲಾಗಿದೆ.

ಗರಿಷ್ಠ ಪ್ರಕರಣ:ಜೂನ್ 4ರಂದು ಜಿಲ್ಲೆಯಲ್ಲಿ 204 ಮಂದಿಗೆ ಸೋಂಕು ಪತ್ತೆಯಾಗಿತ್ತು. ಬುಧವಾರ 281 ಜನರಿಗೆ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಜತೆಗೆ, ಸ್ಥಳೀಯವಾಗಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.

135 ನೆಗೆಟಿವ್; 281 ಪಾಸಿಟಿವ್‌:ಬುಧವಾರ ಪ್ರಯೋಗಾಲಗಳಿಂದ ಬಂದ 416 ವರದಿಗಳಲ್ಲಿ 135 ನೆಗೆಟಿವ್ ಇದ್ದರೆ, 281 ಪಾಸಿಟಿವ್ ಇದೆ. ಇದುವರೆಗೂ ಜಿಲ್ಲೆಯಿಂದ 25,748 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, 22,595 ನೆಗೆಟಿವ್ ಬಂದಿದ್ದರೆ, 2,686 ಪಾಸಿಟಿವ್ ಬಂದಿದೆ.

402 ಮಾದರಿ ರವಾನೆ‌:ಸೋಂಕಿತರ ಪ್ರಾಥಮಿಕ ಸಂಪರ್ಕಿತರ, ಶೀತಜ್ವರ, ತೀವ್ರ ಉಸಿರಾಟದ ಸಮಸ್ಯೆಗಳು ಕಂಡುಬಂದ 402 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 467 ವರದಿಗಳು ಬರುವುದು ಬಾಕಿ ಇದೆ.

ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ 28 ಜನರನ್ನು ಐಸೊಲೇಷನ್‌ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 2,686ಕ್ಕೇರಿಕೆಯಾಗಿದ್ದು, 899 ಸಕ್ರಿಯ ಪ್ರಕರಣಗಳು ಇವೆ. ಬುಧವಾರ 34 ಮಂದಿ ಸೇರಿ 1776 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮೃತರ ಸಂಖ್ಯೆ 11ಕ್ಕೇರಿಕೆ:ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 80 ವರ್ಷದ ಕೋವಿಡ್‌ ಸೋಂಕಿತ ವೃದ್ಧರೊಬ್ಬರು ಈಚೆಗೆ ಮೃತಪಟ್ಟಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 11 ಸೋಂಕಿತರು ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT