ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬಾತನಯರ ಮಾರ್ಗದರ್ಶನ ಎಲ್ಲರೂ ದಾರಿದೀಪ: ಮಂಜುನಾಥ ಪೂಜಾರಿ

ಮುದ್ರಾಡಿಯಲ್ಲಿ ಅಂಬಾತನಯ ಮುದ್ರಾಡಿ ಪ್ರಥಮ ವರ್ಷದ ಸ್ಮರಣೆ‌
Published 24 ಫೆಬ್ರುವರಿ 2024, 14:51 IST
Last Updated 24 ಫೆಬ್ರುವರಿ 2024, 14:51 IST
ಅಕ್ಷರ ಗಾತ್ರ

ಹೆಬ್ರಿ: ಅಂಬಾತನಯ ಮುದ್ರಾಡಿ ಅವರು ನೀಡಿದ ಮಾರ್ಗದರ್ಶನ ನಮಗೆ ದಾರಿದೀಪ. ಅವರ ಆದರ್ಶವನ್ನು ಅನುಸರಿಸಿದಾಗ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಮುದ್ರಾಡಿ ಶ್ರೀಗುರುರಕ್ಷಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ಹೆಬ್ರಿ ಪಾಂಚಜನ್ಯ ಯಕ್ಷಕಲಾ ಪ್ರತಿಷ್ಠಾನದ ಸಹಯೋಗದೊಂದಿಗೆ ಮುದ್ರಾಡಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಬಾತನಯ ಮುದ್ರಾಡಿ ಪ್ರಥಮ ವರ್ಷದ ಸ್ಮರಣೆಯಲ್ಲಿ ಅವರು ಮಾತನಾಡಿದರು.

ಮುದ್ರಾಡಿಯ ಡಾ.ಎಂ.ಎಸ್.ರಾವ್, ಅಂಬಾತನಯರು ಪದವಿ ಪಡೆಯದಿದ್ದರೂ ಅವರು ಬರೆದ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕವಾಗಿದೆ ಎಂದರು.

ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸಿದ್ದರು.

ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಶಾಂತಾ ದಿನೇಶ ಪೂಜಾರಿ, ಸನತ್ ಕುಮಾರ್, ನಿವೃತ್ತ ಶಿಕ್ಷಕ ಕಬ್ಬಿನಾಲೆ ಪರಮೇಶ್ವರ ಹೆಬ್ಬಾರ್, ಅಂಬಾತನಯರ ಪುತ್ರಿ ಶ್ರೀ ಮುದ್ರಾಡಿ, ಪಾಂಚಜನ್ಯ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಧರ ನಾಯಕ್, ಬಲ್ಲಾಡಿ ಚಂದ್ರಶೇಖರ ಭಟ್, ಕಬ್ಬಿನಾಲೆ ಗೋಪಾಲಕೃಷ್ಣ ರಾವ್, ಮುದ್ರಾಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ, ವಿದ್ಯಾ ಜನಾರ್ದನ್, ಸುನಿತಾ ಅರುಣ್ ಹೆಗ್ಡೆ ಇದ್ದರು. ಸತೀಶ್‌ ಬೆಳಂಜೆ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT