ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಶಾಲೆ, ವಸತಿ ನಿಲಯಗಳ ನಿರ್ಮಾಣ

ಶಿವಪುರ: ರಾಜ್ಯಮಟ್ಟದ ಸಬ್‌ ಜೂನಿಯರ್‌ ಕಬಡ್ಡಿ ಚಾಂಪಿಯನ್‌ ಶಿಪ್‌ನಲ್ಲಿ ಸಚಿವ ಸುನಿಲ್ ಕುಮಾರ್
Last Updated 9 ಡಿಸೆಂಬರ್ 2022, 15:46 IST
ಅಕ್ಷರ ಗಾತ್ರ

ಹೆಬ್ರಿ: 16 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಹೊನಲು ಬೆಳಕಿನ 3ನೇ ರಾಜ್ಯಮಟ್ಟದ ಸಬ್‌ ಜೂನಿಯರ್‌ ಕಬಡ್ಡಿ ಚಾಂಪಿಯನ್‌ ಶಿಪ್‌ಗೆ ಶುಕ್ರವಾರ ಶಿವಪುರ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದರು.

ಫ್ರೆಂಡ್ಸ್‌ ಶಿವಪುರ ಮತ್ತು ರಾಜ್ಯ ಮತ್ತು ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಆಶ್ರಯದಲ್ಲಿ ಮೂರು ದಿನಗಳ ಕಾಲ ಟೂರ್ನಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ‘ರಾಜ್ಯದ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು ಕ್ರೀಡಾ ಶಾಲೆಗಳು ಹಾಗೂ ಕ್ರೀಡಾ ವಸತಿ ನಿಲಯಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಅಯೋಜನಾ ಸಮಿತಿಯ ಗೌರವಾಧ್ಯಕ್ಷ ಹುಣ್ಸೆಯಡಿ ಸುರೇಶ್ ಶೆಟ್ಟಿ ಮಾತನಾಡಿ ‘ಶಿವಪುರದ ಮಣ್ಣಿಗೆ ವಿಶೇಷ ಶಕ್ತಿ ಇದ್ದು, ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿನ ಮಕ್ಕಳ ಭವಿಷ್ಯ ಹಾಗೂ ಕ್ರೀಡಾ ಭವಿಷ್ಯದ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಿವಪುರ ಗ್ರಾಮ ಪಂಚಾಯಿತಿಯಿಂದ ಕ್ರೀಡಾಪಟುಗಳ ಪುರಮೆರವಣಿಗೆ ನಡೆಯಿತು. ಶಿವಪುರ ಮಾರ್ಮಕ್ಕಿ ಮಠದ ರಾಮಕೃಷ್ಣ ಭಟ್‌ ಚಾಲನೆ ನೀಡಿದರು. ಐಎಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು, ಉದ್ಯಮಿ ಐತು ಕುಲಾಲ್, ಹೆಬ್ರಿ ಪಿಎಸ್‌ಐ ಸುದರ್ಶನ್ ದೊಡ್ಡಮನಿ ಸೇರಿ ಹಲವರನ್ನು ಗೌರವಿಸಲಾಯಿತು.

ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಹನುಮಂತ ಗೌಡ, ಪ್ರಧಾನ‌ ಕಾರ್ಯದರ್ಶಿ ಮುನಿರಾಜ್, ಉಡುಪಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ರಾಜೇಂದ್ರ ಸುವರ್ಣ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ, ಪಿಡಿಒ ಅಶೋಕ್‌, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್‌ ಶಿವಪುರ, ಪಂದ್ಯಾಟ ಆಯೋಜನಾ ಸಮಿತಿಯ ಅಧ್ಯಕ್ಷ ಸುಮಿತ್‌ಹೆಗ್ಡೆ ಯಡ್ದೆ, ಗೌರವಾಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಶಿವಪುರ ಶಂಕರದೇವ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಭಟ್, ಮುನಿಯಾಲು ಉದಯ ಶೆಟ್ಟಿ, ಯಳಗೋಳಿ ಉದಯ ಶೆಟ್ಟಿ, ಪೆರ್ಡೂರು ಜನನಿ ಮಹೇಶ ಶೆಟ್ಟಿ, ಪ್ರಸನ್ನ ಸೂಡ, ವೆಂಕಟ ರಮಣ ಕಲ್ಕೂರ್, ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಸೀತಾನದಿ ವಿಠ್ಠಲ ಶೆಟ್ಟಿ, ಮಹಾವೀರ ಹೆಗ್ಡೆ, ಜಗದೀಶ ಸೇರಿಗಾರ್‌ ಶಿವಪುರ, ಕೃಷ್ಣಮೂರ್ತಿ ಪೂಜಾರಿ ಶಿವಪುರ, ವಿನಯ ಕುಮಾರ್‌, ಹರೀಶ್‌ ಶಿವಪುರ, ಗಣೇಶ ಕುಲಾಲ್‌, ವಿಶ್ವನಾಥ ನಾಯ್ಕ್‌, ಮಹೇಶ ಕುಲಾಲ್‌, ಉಮೇಶ ಪೂಜಾರಿ ಇದ್ದರು.

ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಶಿವಪ್ರಸಾದ್ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕುಲಾಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT