ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆಗೆ ನೇರ ರೈಲು ಸೇವೆಗೆ ಪೇಜಾವರ ಶ್ರೀಗಳಿಗೆ ಮನವಿ

Published 8 ಜನವರಿ 2024, 13:57 IST
Last Updated 8 ಜನವರಿ 2024, 13:57 IST
ಅಕ್ಷರ ಗಾತ್ರ

ಬ್ರಹ್ಮಾವರ: ಶ್ರೀರಾಮ ಜನ್ಮಭೂಮಿ ಮತ್ತು ಕರಾವಳಿಯ ಉಡುಪಿ ಕುಂದಾಪುರ ನಡುವೆ ನೇರ ರೈಲು ಆರಂಭಿಸಲು ಸಚಿವರಿಗೆ ಸೂಚಿಸುವಂತೆ ಕೋರಿ ಕರಾವಳಿಯ ರೈಲ್ವೆ ಹಿತರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿತು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮನವಿ ಸ್ವೀಕರಿಸಿ, ಈ ಬಗ್ಗೆ ತಕ್ಷಣವೇ ಸಚಿವರಿಗೆ ಪತ್ರ ಬರೆಯುವ ಜೊತೆ ದೂರವಾಣಿ ಮೂಲಕವೂ ಸೂಚಿಸುವುದಾಗಿ ತಿಳಿಸಿದರು.

ದೇಶದ ನೂರು ಸ್ಥಳಗಳಿಂದ ಅಯೋಧ್ಯೆಗೆ ರೈಲುಸೇವೆ ಆರಂಭಿಸಿಲು ರೈಲ್ವೇ ಸಚಿವಾಲಯ ಆದೇಶಿಸಿದ್ದು, ಮೈಸೂರು, ಹುಬ್ಬಳ್ಳಿ, ಕನ್ಯಾಕುಮಾರಿ, ಬೆಂಗಳೂರು ಇತ್ಯಾದಿ ಕಡೆಗಳಿಂದ ರೈಲು ಆರಂಭಕ್ಕೆ ಈಗಾಗಲೇ ಸಿದ್ಧತೆಗಳು ಅಂತಿಮವಾಗಿದೆ. ಈ ಹಿನ್ನೆಲೆಯಲ್ಲಿ ಕಾಶಿ, ಪ್ರಯಾಗ್, ಅಯೋಧ್ಯೆಗೆ ನಿರಂತರ ಭೇಟಿ ನೀಡುವ ಕರಾವಳಿಯ ಭಕ್ತ ಸಮೂಹಕ್ಕೆ ನೇರ ರೈಲು ಸೇವೆ ಆರಂಭಿಸುವಂತೆ ಶ್ರೀಗಳನ್ನು ಕೋರಲಾಯಿತು.

ಕರಾವಳಿ ರೈಲ್ವೇ ಒಕ್ಕೂಟದ ಪರವಾಗಿ ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೇರಿ, ವಾಸುದೇವ ಭಟ್ ಪೆರಂಪಳ್ಳಿ, ಬಾರ್ಕೂರು ರೈಲು ಹಿತರಕ್ಷಣಾ ಸಮಿತಿಯ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರೈಲ್ವೇ ಹೋರಾಟ ಸಮಿತಿಯ ಗೌತಮ್ ಶೆಟ್ಟಿ ಕುಂದಾಪುರ, ಹನೆಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರ ಮರಕಾಲ ಕೂರಾಡಿ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಪುನೀತ್ ಭಂಡಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT