ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೈನ್ ಪ್ಲಾಂಟ್’ ಬಿಡುಗಡೆ, ‘ಹೊಸ ಪುಟ’ ಲೋಕಾರ್ಪಣೆ

Published 23 ಫೆಬ್ರುವರಿ 2024, 15:27 IST
Last Updated 23 ಫೆಬ್ರುವರಿ 2024, 15:27 IST
ಅಕ್ಷರ ಗಾತ್ರ

ಕುಂದಾಪುರ: ‘ಗಿಡಗಳು ನೀರಿಲ್ಲದೆ ಸೋರಗಬಾರದು, ಸಾಯಬಾರದು ಎನ್ನುವ ಉದ್ದೇಶದಿಂದ ಬೆಂಗಳೂರಿನ ಫೈನ್ ಪ್ಲಾಂಟ್ ರಿಸರ್ವರ್ ಪ್ರೈವೇಟ್ ಲಿಮಿಟೆಡ್ ಕಂಪನಿ ‘ಫೈನ್ ಪ್ಲಾಂಟ್’ ತಯಾರಿಸಿದ್ದು, ಇದರ ಬಿಡುಗಡೆ ಕಾರ್ಯಕ್ರಮ ಇದೇ 24ರಂದು ಸಂಜೆ 4.30ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಕಂಪನಿಯ ಸಿಇಒ, ವ್ಯವಸ್ಥಾಪಕ ನಿರ್ದೇಶಕ ಎಚ್‌. ಪ್ರಸನ್ನಚಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಿಷ್ಠ 3ರಿಂದ 6 ತಿಂಗಳವರೆಗೆ ದಿನನಿತ್ಯ ನೀರಿನ ಅವಶ್ಯಕತೆ ಇಲ್ಲದೆ ಗಿಡಗಳನ್ನು ಬೆಳೆಸುವ ಈ ವಿಧಾನ ಸಮಾಜದ ವಿವಿಧ ಕ್ಷೇತ್ರಗಳ ಜನರಿಗೆ ಹಾಗೂ ಪ್ರಕೃತಿಯ ಅವಶ್ಯಕತೆಗಳಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದು, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಬೆಂಗಳೂರು ಬಿಬಿಎಂಪಿಯ ಹೆಚ್ಚುವರಿ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ, ಎಂ. ದಿನೇಶ್ ಹೆಗಡೆ ಮೊಳಹಳ್ಳಿ, ಎ. ಚಂದ್ರಶೇಖರ ಶೆಟ್ಟಿ, ಶೋಭಾ ಎಸ್.ಶೆಟ್ಟಿ, ರಾಘವೇಂದ್ರ ಕುಲಾಲ್, ಡಾ.ರವಿರಾಜ್ ಶೆಟ್ಟಿ ಜಿ. ಭಾಗವಹಿಸುವರು. ಬಳಿಕ ಉಡುಪಿಯ ತರಂಗ ಡ್ಯಾನ್ಸ್ ಕ್ರೀವ್ಸ್ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಮಾರಿಯಮ್ಮ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದ ನಟ ರಕ್ಷಿತ್ ಶೆಟ್ಟಿ

ಕಾಪು (ಪಡುಬಿದ್ರಿ): ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.  ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ನಾನು ಬಾಲ್ಯದಲ್ಲಿ ಪ್ರತಿವರ್ಷ ತಂದೆಯೊಂದಿಗೆ ಮಾರಿಗುಡಿಗೆ ಬಂದು ಹೋಗುತ್ತಿದ್ದೆ. ಆದರೆ ಈಗ ಮಾರಿಗುಡಿಯ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಇಳಕಲ್‌ ಕೆಂಪು ಶಿಲೆಯಲ್ಲಿ ನಿರ್ಮಾಣವಾಗಿರುವ ಗರ್ಭಗುಡಿ ಅದ್ಭುತವಾಗಿ ಮೂಡಿಬಂದಿದೆ ಎಂದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸಂದರ್ ಶೆಟ್ಟಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ ಶೆಟ್ಟಿ ಬಾಲಾಜಿ ಪುಣೆ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಆರ್ ಶೆಟ್ಟಿ ಪಾದೂರು ಹೊಸಮನೆ ಆರ್ಥಿಕ ಸಮಿತಿಯ ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕ ಬಿ.ಕೆ.ಶ್ರೀನಿವಾಸ್ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕ ಬೀನಾ ವಿ ಶೆಟ್ಟಿ ಸಂಚಾಲಕರಾದ ಅನುರಾಧ ಮನೋಹರ್ ಶೆಟ್ಟಿ ಅರ್ಚನಾ ಶೆಟ್ಟಿ ಕವಿತಾ ಶೆಟ್ಟಿ ಅನಿತಾ ಹೆಗ್ಡೆ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT