ಉಡುಪಿ ಮಠದಲ್ಲಿ ಶಿರೂರು ಶ್ರೀ ಆರಾಧನೋತ್ಸವ

7
ಭಕ್ತರಿಗೆ ಅನ್ನ ಸಂತರ್ಪಣೆ, ವಿವಿಧ ಹೋಮ ಹವನ

ಉಡುಪಿ ಮಠದಲ್ಲಿ ಶಿರೂರು ಶ್ರೀ ಆರಾಧನೋತ್ಸವ

Published:
Updated:
Deccan Herald

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ಆರಾಧನೋತ್ಸವ ಬುಧವಾರ ಉಡುಪಿಯ ರಥಬೀದಿಯಲ್ಲಿರುವ ಶಿರೂರು ಮಠದಲ್ಲಿ ನೆರವೇರಿತು.‌

ಶಿರೂರು ಮಠದ ದ್ವಂದ್ವಮಠವಾಗಿರುವ ಸೋದೆ ಮಠದ ನೇತೃತ್ವದಲ್ಲಿ ಆರಾಧನೋತ್ಸವದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬೆಳಿಗ್ಗಿನಿಂದಲೇ ಪವಮಾನ ಹೋಮ, ಲೋಕಪ್ರಧಾನ ಹೋಮಗಳನ್ನು ನಡೆಸಲಾಯಿತು. ಬಳಿಕ ಹೋಮದ ಪ್ರಸಾದವನ್ನು ಶಿರೂರು ಶ್ರೀಗಳ ವೃಂದಾವನಕ್ಕೆ ಸಮರ್ಪಿಸಲಾಯಿತು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ  ಪಲಿಮಾರು ಮಠದ ವತಿಯಿಂದ ಶಿರೂರು ಶ್ರೀಗಳ ಆರಾಧನೋತ್ಸವದ ಅಂಗವಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಲಾಯಿತು. ಶಿರೂರು ಮಠದಲ್ಲಿ ಲಕ್ಷ್ಮೀವರ ತೀರ್ಥರ ಭಾವಚಿತ್ರಕ್ಕೆ ಹೂವಿನ ಮಾಲೆಹಾಕಿ ಮಹಾಪೂಜೆ ಸಲ್ಲಿಸಲಾಯಿತು ಎಂದು ಸೋದೆ ಮಠ ಆಡಳಿತ ಮಂಡಳಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !