ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಹಬ್ಬಗಳು: ತರಕಾರಿ, ಹಣ್ಣು ದುಬಾರಿ

ರಾಜ್ಯದ ಹಲವೆಡೆ ಭಾರಿ ಮಳೆ; ದರ ಮತ್ತಷ್ಟು ಹೆಚ್ಚುವ ಸಾದ್ಯತೆ
Last Updated 1 ಸೆಪ್ಟೆಂಬರ್ 2022, 16:46 IST
ಅಕ್ಷರ ಗಾತ್ರ

ಉಡುಪಿ: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ದರವೂ ದುಬಾರಿಯಾಗಿದೆ. ರಾಜ್ಯದೆಲ್ಲೆಡೆ ಸುರಿದ ಭಾರಿ ಮಳೆಯಿಂದ ತರಕಾರಿ ಬೆಳೆ ನಾಶವಾಗಿರುವುದೂ ದರ ಏರಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

15 ದಿನಗಳ ಹಿಂದೆ ಕೆ.ಜಿಗೆ ₹ 15 ಇದ್ದ ಟೊಮೆಟೊ ದುಪ್ಪಟ್ಟಾಗಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ₹ 30ಕ್ಕೆ ಮಾರಾಟವಾಗುತ್ತಿದೆ. ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಟೊಮೆಟೊ ಬೆಳೆ ಬಹುತೇಕ ನಾಶವಾಗಿರುವುದರಿಂದ ದರ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿ ಅಶ್ರಫ್‌.

ಬೀನ್ಸ್‌ ₹ 50 ರಿಂದ ₹ 65ಕ್ಕೆ ಏರಿಕೆಯಾಗಿದ್ದು, ಕ್ಯಾರೆಟ್‌ ಕೆಜಿಗೆ ₹ 80 ತಲುಪಿದ್ದು ಶತಕದತ್ತ ದಾಪುಗಾಲಿಟ್ಟಿದೆ. ಈರುಳ್ಳಿ ₹ 30 ಯಥಾಸ್ಥಿತಿ ಕಾಯ್ದುಕೊಂಡಿದ್ದರೂ ಮಳೆಯ ಕಾರಣದಿಂದ ಮುಂದೆ ಏರುಗತಿಯಲ್ಲಿ ಸಾಗುವ ಮುನ್ಸೂಚನೆ ನೀಡುತ್ತಿದೆ. ಬೀಟ್‌ರೂಟ್‌ 45 ರಿಂದ 55ಕ್ಕೆ ಜಿಗಿದಿದ್ದು, ಈರೇಕಾಯಿ ₹ 50 ರಿಂದ ₹ 70ಕ್ಕೆ ಹೆಚ್ಚಾಗಿದೆ.

ಹಬ್ಬಕ್ಕೆ ತರಕಾರಿ ಖರೀದಿ ಅಗತ್ಯವಾಗಿರುವುದರಿಂದ ದುಬಾರಿಯಾದರೂ ಅನಿವಾರ್ಯವಾಗಿ ಖರೀದಿಸಬೇಕಾಗಿದೆ. ತರಕಾರಿ ಹೆಚ್ಚು ತಾಜಾತನದಿಂದ ಕೂಡಿಲ್ಲ ಎನ್ನುತ್ತಾರೆ ಗ್ರಾಹಕಿ ಅನಸೂಯ.

ಎಲೆ ಕೋಸು ಕೆ.ಜಿಗೆ ₹ 20 ರಿಂದ ₹ 25, ಕ್ಯಾಪ್ಸಿಕಂ ₹ 60, ಆಲೂಗಡ್ಡೆ ₹ 35ರಿಂದ ₹ 40, ಬದನೆ ₹ 30 ರಿಂದ ₹ 40, ಬೆಳ್ಳುಳ್ಳಿ ಕೆ.ಜಿಗೆ ₹ 80ರಿಂದ ₹ 100, ಹಸಿ ಮೆಣಸಿಕಾಯಿ ಕೆ.ಜಿಗೆ 75 ರಿಂದ 85ರ ದರದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ನುಗ್ಗೆ ಕೆ.ಜಿಗೆ ₹ 60 ರಿಂದ ₹ 70 ದರ ಇದೆ. ಹಾಗಲಕಾಯಿ 50 ರಿಂದ 55, ಬೆಂಡೆ ₹ 40, ತೊಂಡೆ ₹ 40, ಹೂಕೋಸು ₹ 35, ಗೆಡ್ಡೆಕೋಸು ₹ 50, ಸೋರೆಕಾಯಿ ₹ 50 ದರ ಇತ್ತು.

ಹಬ್ಬಗಳ ಹಿನ್ನೆಲೆಯಲ್ಲಿ ಹಣ್ಣುಗಳ ದರವೂ ಏರುಮುಖವಾಗುತ್ತಿದೆ. ಸೇಬು ಹೊರತುಪಡಿಸಿ ಉಳಿದ ಹಣ್ಣುಗಳ ದರ ಹೆಚ್ಚಾಗಿದೆ. ಸೇಬು ಕೆ.ಜಿಗೆ 100 ರಿಂದ ₹ 130ರವರೆಗೆ ಮಾರಾಟವಾಗುತ್ತಿದೆ. ಸೀತಾಫಲ ₹ 120, ಸಪೋಟ ₹ 120, ದಾಳಿಂಬೆ ₹ 220, ಮೂಸಂಬಿ ₹ 70, ಪಪ್ಪಾಯ ಕೆ.ಜಿಗೆ ₹ 40 ಇದೆ.

ದೇವರ ಪೂಜೆಗೆ ಹಾಗೂ ನಿತ್ಯದ ಬಳಕೆಗೆ ಹೆಚ್ಚು ಬಳಸಲಾಗುವ ಏಲಕ್ಕಿ ಬಾಳೆಹಣ್ಣಿನ ದರ ಗಗನಕ್ಖೇರಿದೆ. ಅಂಗಡಿಗಳಲ್ಲಿ ಚಿಲ್ಲರೆಯಾಗಿ ಕೆ.ಜಿಗೆ ₹ 90 ದರವಿದ್ದರೆ, ಸಗಟು ಮಾರುಕಟ್ಟೆಯಲ್ಲಿ ₹ 70 ದರ ಇದೆ. ಪಚ್ಚಬಾಳೆಯ ದರ ಕೆ.ಜಿಗೆ ₹ 40 ಮುಟ್ಟಿದೆ. ಸದ್ಯ ಹಣ್ಣಿನ ದರ ಇಳಿಕೆಯಾಗುವ ಲಕ್ಷಣಗಳಿಲ್ಲ ಎನ್ನುತ್ತಾರೆ ವ್ಯಾಪಾರಿ ಮುರುಗೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT