ಭಾನುವಾರ, ಆಗಸ್ಟ್ 18, 2019
26 °C

ಕಾರು–ಪಿಕಪ್ ಡಿಕ್ಕಿ: ಪರಿಹಾರ ಸಾಮಗ್ರಿ ಕೊಟ್ಟು ಬರುತ್ತಿದ್ದ ಮೂವರ ಸಾವು

Published:
Updated:

ಶಿರಸಿ: ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಬಾಳೆಹದ್ದ ಕ್ರಾಸ್ ಬಳಿ ಕಾರು‌ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. 

ಮೈಸೂರಿನ ಎಬಿವಿಪಿ ಮುಖಂಡ, ಎಂಐಟಿಯಲ್ಲಿ ಉದ್ಯೋಗಿಯಾಗಿದ್ದ ರವಿಕುಮಾರ್, ಭೈರುಂಬೆ ಸೂರಿಮನೆಯ ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ ಮೃತರು. ಮಾಧವ್ ಮತ್ತು ಶೇಖರ್  ಎಂಬುವವರು ಗಾಯಗೊಂಡಿದ್ದಾರೆ. 

ರವಿಕುಮಾರ್ ಮತ್ತು ತಂಡದವರು ಕಿರವತ್ತಿ ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಪೂರೈಸಿ, ವಾಪಸ್ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ.

Post Comments (+)