ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 43 ಸಾವಿರ ವಂಚನೆ: ಜ್ಯೋತಿಷಿ ವಿರುದ್ಧ ದೂರು

ಕೌಟುಂಬಿಕ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಮೋಸ
Last Updated 10 ಮೇ 2019, 14:28 IST
ಅಕ್ಷರ ಗಾತ್ರ

ಕಾರವಾರ: ‘ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಡುವುದಾಗಿ ಒಟ್ಟು ₹ 43 ಸಾವಿರ ಪಡೆದು ವಂಚನೆ ಮಾಡಿದ್ದಾರೆ’ ಎಂದು ಜ್ಯೋತಿಷಿಯೊಬ್ಬರ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ರಾಮಚಂದ್ರ ಭಟ್ಟ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. ನಗರದ ಬಾಡದ ದಿಲೀಪ ನಾಯ್ಕ ಎನ್ನುವವರು ದೂರುನೀಡಿದ್ದಾರೆ.

‘ರಾಮಚಂದ್ರ ಅವರು, ‘ಮನೆಯಲ್ಲಿ ತೊಂದರೆ, ಸತಿ– ಪತಿ ಕಲಹ, ಮಕ್ಕಳ ವಿದ್ಯಾಭ್ಯಾಸದ ತೊಂದರೆ ಇದ್ದಲ್ಲಿ ಮೊಬೈಲ್ ಸಂಖ್ಯೆಗೆ ಕರೆಮಾಡಿ. ನಿಮ್ಮ ಸಮಸ್ಯೆಯನ್ನು ಎರಡು– ಮೂರು ದಿನಗಳಲ್ಲಿ ಪರಿಹಾರ ಮಾಡಿಸಿಕೊಡುತ್ತೇನೆ’ ಎಂದು ಏ.6ರಂದು ‘ಇ– ಡಿಜಿಟಲ್’ ಟಿವಿ ಚಾನಲ್‌ನಲ್ಲಿ ಜಾಹೀರಾತು ನೀಡಿದ್ದರು. ಅದರಂತೆ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕಾಗಿ ಅವರನ್ನು ಸಂಪರ್ಕಿಸಿದ್ದೆ’ ಎಂದು ದಿಲೀಪ ನಾಯ್ಕ ವಿವರಿಸಿದ್ದಾರೆ.

‘ಮಧುಸೂದನ ಎಂಬ ಹೆಸರಿನ ವ್ಯಕ್ತಿಯ ಎಸ್‌ಬಿಐ ಉಡುಪಿ ಶಾಖೆಯ ಖಾತೆ ಸಂಖ್ಯೆಗೆ ಅಂದು₹ 8,500 ಜಮಾ ಮಾಡಲು ತಿಳಿಸಿದ್ದರು. ಅದರಂತೆ ಹಣ ಜಮಾ ಮಾಡಿದ ನಂತರ ವಶೀಕರಣ ಮಾಡಿದ ತಾಯತ ಹಾಗೂ ಕುಂಕುಮವನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟಿದ್ದರು. ಸಮಸ್ಯೆ ಪರಿಹಾರವಾಗದೇ ಮತ್ತೆ ಸಂಪರ್ಕಿಸಿದಾಗ, ಸಮಸ್ಯೆ ಪೂರ್ತಿಯಾಗಿ ಸರಿಪಡಿಸಬೇಕೆಂದರೆ ಇನ್ನೂ₹ 34,500 ಹಣವನ್ನು ನೀಡಬೇಕು ಎಂದು ತಿಳಿಸಿದ್ದರು. ಅದರಂತೆ ಆ ಹಣವನ್ನೂ ಜಮಾ ಮಾಡಿದ್ದೆ’ ಎಂದು ತಿಳಿಸಿದ್ದಾರೆ.

‘ಇಷ್ಟಾದರೂಸಮಸ್ಯೆ ಪರಿಹಾರ ಆಗಲಿಲ್ಲ. ರಾಮಚಂದ್ರ ಅವರು ನನ್ನಿಂದ ಹಣ ಪಡೆದು, ನಂಬಿಸಿ ಮೋಸ ಮಾಡಿದ್ದಾರೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT