ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19 ಪೀಡಿತರಿಗೆ ನೌಕಾಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ

Last Updated 28 ಮಾರ್ಚ್ 2020, 14:27 IST
ಅಕ್ಷರ ಗಾತ್ರ

ಕಾರವಾರ:ಇಲ್ಲಿನ ಸೀಬರ್ಡ್ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತಸಾಮಾನ್ಯ ನಾಗರಿಕರ ಚಿಕಿತ್ಸೆಗೆ ತೆರೆದುಕೊಂಡ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.

ರಾಜ್ಯ ಸರ್ಕಾರ ಮಾಡಿದ ಮನವಿಗೆ ಸ್ಪಂದಿಸಿದನೌಕಾಪಡೆಯು, ‘ಪತಂಜಲಿ’ ಆಸ್ಪತ್ರೆಯಲ್ಲಿಕೆಲವು ಬದಲಾವಣೆ ಮಾಡಿದೆ. ಈಗಾಗಲೇಭಟ್ಕಳದ ಆರು ಮಂದಿಗೆಕೋವಿಡ್ 19ದೃಢಪಟ್ಟಿದ್ದು, ಅವರನ್ನು ಇಲ್ಲಿಗೆ ದಾಖಲಿಸಲಾಗಿದೆ.

‘ಕೋವಿಡ್ 19 ಚಿಕಿತ್ಸಾವಿಭಾಗದಲ್ಲಿಸಾಕಷ್ಟು ವೈದ್ಯಕೀಯ ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತ್ಯೇಕವಾದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಶುಷ್ರೂಕರು ಸದಾ ಆಸ್ಪತ್ರೆಯ ಆವರಣದಲ್ಲಿ ಇರುತ್ತಾರೆ.ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಜೈವಿಕ ವಿಲೇವಾರಿ ವ್ಯವಸ್ಥೆಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಅಳವಡಿಸಿಕೊಳ್ಳಲಾಗಿದೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT