ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಖಂಡ ಭಾರತದ ನೈಜ ಸ್ವಾತಂತ್ರ್ಯಕ್ಕೆ ಸಂಕಲ್ಪ’

Last Updated 15 ಆಗಸ್ಟ್ 2022, 16:25 IST
ಅಕ್ಷರ ಗಾತ್ರ

ಕಾರವಾರ: ‘ಭಾರತೀಯ ಸಂಸ್ಕೃತಿಯ ಮಕ್ಕಳೆಲ್ಲರೂ ನಮ್ಮ ಮೂಲ ಸಂಸ್ಕೃತಿಗೆ ಮರಳುವಂತಾಗಬೇಕು. ಹಿಂದೆ ಭಾರತದ ಭೂಭಾಗವೇ ಆಗಿದ್ದ ಎಲ್ಲ ಪ್ರದೇಶಗಳು ಮತ್ತೆ ಭಾರತ ಸಂಸ್ಕೃತಿಗೆ ಮರಳಬೇಕು. ಆಗ ನಿಜವಾಗಿ ಭಾರತಕ್ಕೆ ಸ್ವಾತಂತ್ರ್ಯ ಬರುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಈ ಸಂಕಲ್ಪ ಸಾಕಾರವಾಗಿಸುವ ಪಣ ತೊಡೋಣ’ ಎಂದು ಹೇಳಿದರು.

‘ವಿದೇಶಿಯರ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವನ್ನು ನಾವು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದ್ದೇವೆ. ಆದರೆ, ಆಹಾರ- ವಿಹಾರ, ಉಡುಗೆ ತೊಡುಗೆ, ಆಚಾರ– ವಿಚಾರ, ಸಂಸ್ಕೃತಿ– ಸಂಪ್ರದಾಯ ಎಲ್ಲದರಲ್ಲೂ ವಿದೇಶಿಯರ ಮಾನಸ ಪುತ್ರರಾಗಿಯೇ ಉಳಿದಿದ್ದೇವೆ. ಆ ಸಂಕೋಲೆ ಕಳಚಿಕೊಂಡು ಎಲ್ಲೆಡೆ ಭಾರತೀಯತೆ ವಿಜೃಂಭಿಸುವುದೇ ನೈಜ ಸ್ವಾತಂತ್ರ್ಯ’ ಎಂದು ವಿಶ್ಲೇಷಿಸಿದರು.

‘ನಮ್ಮ ವೈಯಕ್ತಿಕ ಬದುಕಿನಲ್ಲಿ ಭಾರತೀಯತೆ ಬರಬೇಕು. ಮನೆ, ಸಮಾಜ, ರಾಜ್ಯ, ರಾಷ್ಟ್ರ ಎಲ್ಲದರಲ್ಲೂ ಭಾರತೀಯತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಭಾರತಕ್ಕೆ ದೊಡ್ಡ ಶಕ್ತಿ ಬರುತ್ತದೆ’ ಎಂದರು.

ಕುಮಟಾದ ನೂತನ ಉಪ ವಿಭಾಗಾಧಿಕಾರಿ ಆರ್.ಬಿ.ಜಗಳಸರ್ ಅವರು ಸ್ವಾಮೀಜಿ ಆಶೀರ್ವಾದ ಪಡೆದರು. ತಹಶೀಲ್ದಾರ್ ಅಶೋಕ್ ಭಟ್ ಇದ್ದರು. ರೇಷ್ಮಾ ಭಟ್ ಮತ್ತು ರಮ್ಯಾ ಭಟ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT