ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗವತಿಗೆ ಹುಲಿ ಬಂದಿಲ್ಲ: ಅಧಿಕಾರಿಗಳ ಸ್ಪಷ್ಟನೆ

ವೈರಲ್ ಆದ ವಿಡಿಯೊ ಬೇರೆ ಊರಿನದ್ದು: ಸ್ಥಳೀಯರು ಆತಂಕ ಪಡಬೇಕಿಲ್ಲ
Last Updated 29 ನವೆಂಬರ್ 2019, 11:12 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ಭಾಗವತಿ ಬಳಿ ಹುಲಿಗಳು ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಈ ಪ್ರದೇಶದ್ದಲ್ಲ. ಗ್ರಾಮಸ್ಥರು ಆತಂಕ‍ಪಡಬೇಕಿಲ್ಲ ಎಂದುವಲಯ ಅರಣ್ಯಾಧಿಕಾರಿ ಅಭಿಷೇಕ ನಾಯಕ ಸ್ಪಷ್ಟಪಡಿಸಿದ್ದಾರೆ.

ಭಾಗವತಿ ಪ್ರದೇಶದ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಎರಡು ಹುಲಿಗಳು ಕಾಣಿಸಿಕೊಂಡಿವೆ ಎಂಬ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೊವನ್ನು ಗಮನಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಈ ಭಾಗದ ಕಾಡಿನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ವಿಡಿಯೊದಲ್ಲಿರುವ ಹೆದ್ದಾರಿ ಹಾಗೂ ಇತರ ದೃಶ್ಯಗಳಿಗೂ ಭಾಗವತಿ ಪ್ರದೇಶಕ್ಕೂ ಹೋಲಿಕೆಯಾಗುತ್ತಿಲ್ಲ. ಹುಲಿಗಳು ಹೆಜ್ಜೆ ಹಾಕಿದ ಯಾವುದೇ ಕುರುಹುಗಳೂ ಕಂಡುಬಂದಿಲ್ಲ. ಅಲ್ಲದೇ ಸ್ಥಳೀಯರೂ ಹುಲಿಗಳನ್ನು ನೋಡಿಲ್ಲ ಎಂದು ತಿಳಿಸಿದ್ದಾಗಿಅವರು ಹೇಳಿದ್ದಾರೆ.

ಯಾವುದೇ ಕಾಡು ಪ್ರಾಣಿಗಳು ಗ್ರಾಮಗಳಲ್ಲಿ, ರಸ್ತೆಗಳಲ್ಲಿ ಕಂಡು ಬಂದಲ್ಲಿ ಕೂಡಲೇ ಸಮೀಪದ ಅರಣ್ಯ ಇಲಾಖೆಕಚೇರಿಗೆ ಮಾಹಿತಿ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT