ಶಿರಸಿ: ತಾಲ್ಲೂಕಿನ ಕಾಗೇರಿಯ ಅನಂತ ಹೆಗಡೆ (83) ಶನಿವಾರ ಬೆಳಿಗ್ಗೆ ನಿಧನರಾದರು.
ಅವರಿಗೆ ಪತ್ನಿ, ಶಾಸಕ ವಿಶ್ವೇಶ್ವರ ಹೆಗಡೆ ಸೇರಿ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಕಾಗೇರಿ ಸಮೀಪದ ಬರೂರಿನಲ್ಲಿ ಜನತಾ ವಿದ್ಯಾಲಯ ಪ್ರಾರಂಭವಾಗಲು ಅವರು ವಿಶೇಷ ಪರಿಶ್ರಮ ಪಟ್ಟಿದ್ದರು. ಕುಳವೆ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ 10 ವರ್ಷ ಕಾರ್ಯನಿರ್ವಹಿಸಿದ್ದರು.