ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಭಗ್ನ ಪ್ರೇಮಿಯಿಂದ ಯುವಕನಿಗೆ ಚೂರಿ ಇರಿತ

Published 22 ಮೇ 2024, 13:58 IST
Last Updated 22 ಮೇ 2024, 13:58 IST
ಅಕ್ಷರ ಗಾತ್ರ

ಕುಮಟಾ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಹೊರಟ ಇನ್ನೊಬ್ಬ ಯುವಕನ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣದ ಮಹಾತ್ಮಾಗಾಂಧಿ ಕ್ರೀಡಾಂಗಣದ ಬಳಿಯ ಸಾರ್ವಜನಿಕ ಗ್ರಂಥಾಲಯದ ಸಮೀಪದ ಬುಧವಾರ ನಡೆದಿದೆ.

‘ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ವಾಟರ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ರಾಜೇಶ ಅಂಬಿಗ (27) ಆರೋಪಿಯಾಗಿದ್ದು ತಾಲ್ಲೂಕಿನ ದುಂಡಕುಳಿಯ ಆಟೊ ಚಾಲಕ ಸಂತೋಷ ಅಂಬಿಗ (27) ಎಂಬುವವರಿಗೆ ಚೂರಿ ಇರಿದಿದ್ದು ತೀವ್ರ ಗಾಯಗೊಂಡಿರುವ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ರಾಜೇಶ ಪ್ರೀತಿಸುತ್ತಿದ್ದ ಯುವತಿಯು ಈತನ ವರ್ತನೆ ಸರಿ ಇಲ್ಲದ ಕಾರಣಕ್ಕೆ ಇನ್ನೊಬ್ಬ ಯುವಕ ಸಂತೋಷ ಎಂಬಾತನನ್ನು ಪ್ರೀತಿಸಿ ಮದುವೆಯಾಗಲು ತಯಾರಿ ನಡೆಸಿದ್ದಳು. ಇದರಿಂದ ಕೋಪಗೊಂಡ ರಾಜೇಶ ಹಲ್ಲೆ ನಡೆಸಿ ಖಾರದ ಪುಡಿ ಎರಚಿ ಕೊಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ’ ಎಂದು ಪ್ರಕರಣ ದಾಖಲಿಸಿರುವ ಪಿ.ಎಸ್.ಐ ಮಂಜುನಾಥ ಗೌಡರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT