ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ | ಜಿಂಕೆ ಬೇಟೆಗಾರನ ಬಂಧನ

Published 31 ಡಿಸೆಂಬರ್ 2023, 14:12 IST
Last Updated 31 ಡಿಸೆಂಬರ್ 2023, 14:12 IST
ಅಕ್ಷರ ಗಾತ್ರ

ಯಲ್ಲಾಪುರ: ಜಿಂಕೆ ಬೇಟೆ ಮತ್ತು ಮಾಂಸ ಮಾರಾಟದ ಆರೋಪದ ಮೇಲೆ ಯಲ್ಲಾಪುರ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಪಟ್ಟಣದ ತಳ್ಳಿಕೇರಿ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ತಿಮ್ಮಣ್ಣ ಗಣಪತಿ ಗೌಡ ಬಂಧಿತ ಆರೋಪಿ.  ಅರಣ್ಯಕಳ್ಳತನ, ವನ್ಯಜೀವಿ ಬೇಟೆಗೆ ಸಂಬಂಧಿಸಿ ಈತನ ಮೇಲೆ 5 ಪ್ರಕರಣಗಳು ಇವೆ. ಅ. 10ರಂದು ಪಟ್ಟಣದ ಕಾಳಮ್ಮನಗರದ ಮಾರ್ಕೋಜಿ ದೇವಸ್ಥಾನದ ಹತ್ತಿರ ನಡೆದ ಜಿಂಕೆ ಬೇಟೆ ಮತ್ತು ಮಾಂಸ ಮಾರಾಟ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ. ಕಳೆದ ವರ್ಷ ಕಲಘಟಗಿ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ಸಾಗಣೆ ಮಾಡುವ ಸಮಯದಲ್ಲಿ ಯಲ್ಲಾಪುರ ಪೊಲೀಸರು ಜೋಡಕೆರೆ ಹತ್ತಿರ ವಾಹನ ತಪಾಸಣೆ ಮಾಡುವಾಗ ಈತ ಓಡಿ ತಲೆಮರೆಸಿಕೊಂಡಿದ್ದ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT