ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಕ್ಕಾಗಿ ಹಿಂದೂ ಸಮಾಜವನ್ನು ನಾಶ ಮಾಡುವ ಕೆಲಸ‌ ನಡೆಯುತ್ತಿದೆ:  ಕಲ್ಲಡ್ಕ ಭಟ್

Last Updated 22 ಮಾರ್ಚ್ 2023, 15:51 IST
ಅಕ್ಷರ ಗಾತ್ರ

ಶಿರಸಿ: ಮತಕ್ಕೋಸ್ಕರ ಹಿಂದೂ ಸಮಾಜವನ್ನೇ ನಾಶ ಮಾಡುವ ‌ಕೆಲಸ ಆಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರ ಕಾರ್ಯಕಾರಿಣಿ ಡಾ. ಪ್ರಭಾಕರ‌ ಭಟ್ಟ ಕಲ್ಲಡ್ಕ ಹೇಳಿದರು.

ಬುಧವಾರ ಇಲ್ಲಿನ ಯುಗಾದಿ ಉತ್ಸವ ಸಮಿತಿ ಬೆಳ್ಳಿ ಹಬ್ಬ ಹಾಗೂ ಶೋಭನ ನಾಮ ಸಂವತ್ಸರದ ಯುಗಾದಿ ಉತ್ಸವದ ಸಾರ್ವಜನಿಕ ಕಾರ್ಯಕ್ರಮದ ವಕ್ತಾರರಾಗಿ ಅವರು ಮಾತನಾಡಿದರು. ಸರ್ಕಾರ ನೀಡುವ ಸೌಲಭ್ಯದ ಲಾಭ ಕೇವಲ ಒಂದು‌ ಸಮುದಾಯಕ್ಕೆ ತಲುಪುತ್ತಿದೆ. ಸೌಲಭ್ಯಗಳ ಜೊತೆ‌ ಜನ ಸಂಖ್ಯೆ ಏರುತ್ತಿದೆ. ಜನ ಸಂಖ್ಯೆ ಏರಿದಂತೆ ಈ ನೆಲದ ಭೂಮಿ ಕೂಡ ಅವರದ್ದಾಗುತ್ತಿದೆ.

ಲವ್ ಜಿಹಾದ್ ನಂತ ಪ್ರಕರಣಗಳು ಹೆಚ್ಚುತ್ತಿವೆ. ಮೋಸ ವಂಚನೆ ನಡೆದಿದೆ. ಇವೆಲ್ಲವೂ ನಡೆಯುವುದು ಹಿಂದೂ ಸಮಾಜದವರ ಮೇಲೆ ಎಂದರು. ಈ ಮೊದಲೇ ಹಿಂದುಗಳ‌ ಜನ ಸಂಖ್ಯೆ ಕುಸಿದಿದೆ. ಇನ್ನೊಂದು ಕಡೆ ಹಿಂದೂ ಸಮಾಜದ ಮತಾಂತರ ಕಾರ್ಯ ಕೂಡ ನಡೆದಿದೆ ಎಂದು ಆರೋಪಿಸಿದರು.

ಗುಣಕ್ಕೆ ಮರುಳಾಗಬೇಕೇ ಹೊರತು ಹಣಕ್ಕಲ್ಲ. ಹಿಂದೂ ಸಮಾಜ ಜಗತ್ತಿಕೋಸ್ಕರ ಬದುಕಬೇಕಿದೆ ಎಂದು ಹೇಳಿದ ಅವರು, ಭಗವದ್ಗೀತೆ ಎಲ್ಲ‌ ಮಕ್ಕಳಿಗೂ ಹೇಳಿಕೊಡಬೇಕು. ಈ ದೇಶದ‌ ಮಣ್ಣಿನ ಸುವಾಸನೆ ಭಗವದ್ಗೀತೆ. ವಿದೇಶದಲ್ಲಿ ಕೂಡ ಗೀತೆ ಕಲಿಸಬೇಕು. ಸ್ವರ್ಣವಲ್ಲೀ‌ ಸಂಸ್ಥಾನ ಗೀತಾಭಿಯಾನ ನಡೆಸುವದು ಶ್ರೇಷ್ಠ ಕೆಲಸ. ಪ್ರತೀ ಮನೆಯಲ್ಲಿ ಮಕ್ಕಳಿಗೆ ಗೀತೆ ಓದಿಸಬೇಕು ಎಂದರು.

ನಮ್ಮ ಪರಂಪರೆ ಋಷಿ ಪರಂಪರೆ. ಹಿಂದೂ ಸಮಾಜ‌ದವರು ಪ್ರಕೃತಿ ದೇವರು‌ ಅಂತ ತಿಳಿದವರು. ಪ್ರಕೃತಿಯ ಬದುಕಿನಲ್ಲಿ ಸಂತೋಷ ಉಂಟಾದಾಗ ಆ ಸಂದರ್ಭ ನಮ್ಮ ಹೊಸ ವರ್ಷ. ಯುಗಾದಿಗೆ ಹೂವು ಅರಳುತ್ತದೆ. ಎಲೆ ಚಿಗುರುತ್ತದೆ. ಅದೇ ಹೊಸ ವರ್ಷ ಎಂದರು.

ಸ್ವರ್ಣವಲ್ಲಿ ‌ಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿ, ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು. ಸಮಿತಿ ಅಧ್ಯಕ್ಷ ಶ್ರೀಕಾಂತ ನಾಯ್ಕ ಅಧ್ಯಕ್ಷತೆವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT