ಕಾರವಾರ: ಸಿದ್ದಾಪುರ ತಾಲ್ಲೂಕಿನ ಅವರಗುಪ್ಪದಲ್ಲಿ ನಡೆದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಪೈಕಿ ಐವರ ನ್ಯಾಯಾಂಗ ಬಂಧನ ಅವಧಿಯನ್ನು ಫೆಬ್ರುವರಿ 21ರವರೆಗೆ ವಿಸ್ತರಿಸಿ ಸಿದ್ದಾಪುರದ ಜೆಎಂಎಫ್ಸಿ ಕೋರ್ಟ್ ಬುಧವಾರ ಆದೇಶಿಸಿದೆ.

ಪ್ರಮುಖ ಆರೋಪಿಗಳಾದ ಸುಚಿತ್ರಾ ನಾಯ್ಕ, ಆಕೆಯ ತಂದೆ ಲೋಕನಾಥ ನಾಯ್ಕ, ಜೋತಿಷಿ ಕಮಲಾಕರ ಹೆಗಡೆ (ಭಟ್ಟ), ಆಕಾಶ್ ಎಂ. ಮತ್ತು ಶಿವಮೊಗ್ಗದ ವಿನಯ್ ಎಂಬುವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಳಿದ ಮೂವರು ಆರೋಪಿಗಳಾದ ಶಿವಮೊಗ್ಗದ ಮಹಮ್ಮದ್ ಮೈಫೂಜ್, ಫೈಸಲ್ ಜಾನ್, ಇಫ್ರಾನ್ ಅಮಾನುಲ್ಲಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನೂ ಮೂರು ದಿನ ವಿಸ್ತರಿಸಲಾಗಿದೆ.

ಮೂವರು ಆರೋಪಿಗಳನ್ನು ಸುಚಿತ್ರಾ, ಜೋತಿಷಿಗೆ ಪರಿಚಯಿಸಿದ್ದ ವಿನಯ್ ಎಂಬುವರನ್ನು ಎರಡು ದಿನದ ಹಿಂದೆ ಸಿದ್ದಾಪುರ ಠಾಣೆ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದರು. ಫೆಬ್ರುವರಿ 3ರಂದು ವಸಂತ ನಾಯ್ಕ ಅವರನ್ನು ಹತ್ಯೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.