ಕಾರವಾರ: ‘ಇಡೀ ದೇಶ ಪಹಲ್ಗಾಮ್ ದಾಳಿಯ ನೋವಿನಲ್ಲಿರುವಾಗ ಕರಾವಳಿ ಉತ್ಸವ ಆಯೋಜಿಸುವುದು ಸರಿಯಲ್ಲ. ಹೀಗಾಗಿ ಉತ್ಸವ ರದ್ದುಪಡಿಸಬೇಕು’ ಎಂದು ಸನಾತನ ಧರ್ಮ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಗಜೇಂದ್ರ ನಾಯ್ಕ ಆಗ್ರಹಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಹತ್ಯೆಗೈದಿರುವುದು ಪೈಶಾಚಿಕ ಕೃತ್ಯ. ದುರ್ಘಟನೆಯಲ್ಲಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಇದೊಂದು ಶೋಕದ ಸಮಯ. ಇಂತ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ರಂಜಿಸುವುದು ಸರಿಯಲ್ಲ’ ಎಂದರು.

‘ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಯುದ್ಧ ಸಾರುವ ಸ್ಥಿತಿಯಲ್ಲಿದೆ. ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೌಕಾನೆಲೆ ಇರುವ ಕಾರವಾರವೂ ಸೂಕ್ಷ್ಮ ಸ್ಥಳವಾಗಿರುವುದರಿಂದ ಇಲ್ಲಿ ಕಟ್ಟೆಚ್ಚರ ವಹಿಸಬೇಕು. ಹೀಗಾಗಿ ಜನರು ಹೆಚ್ಚು ಸೇರುವ ಉತ್ಸವ ಆಯೋಜಿಸಬಾರದು’ ಎಂದು ಆಗ್ರಹಿಸಿದರು.

‘ದೇಶದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಇಡೀ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕು. ಸೇನೆಯ ವಿರುದ್ಧ ಟೀಕಿಸುವ ಕೆಲಸ ನಡೆಯಬಾರದು. ಸೈನಿಕರು ಪ್ರಾಣ ಒತ್ತೆ ಇಟ್ಟು ಹೋರಾಡುವ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ಜನರು ರಂಜಿಸುವುದು ಸರಿಯಾಗದು’ ಎಂದರು.

ವೇದಿಕೆ ಪದಾಧಿಕಾರಿಗಳಾದ ಶರದ್ ಬಾಂದೇಕರ, ಚಂದ್ರಕಾಂತ ನಾಯ್ಕ, ಅಶೋಕ ರಾಣೆ, ಚಂದ್ರಕಾಂತ ಹರಿಕಂತ್ರ, ಸುನೀಲ ತಾಮ್ಸೆ, ನರೇಶ ಹರಿಕಂತ್ರ, ಸುಧೀರ ನಾಯ್ಕ, ಸತೀಶ ಅಮದಳ್ಳಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.