ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಜನತಾ ದರ್ಶನ:ಬಸ್ ನಲ್ಲಿ ತೆರಳಿದ ಅಧಿಕಾರಿಗಳು

Published 10 ಅಕ್ಟೋಬರ್ 2023, 4:05 IST
Last Updated 10 ಅಕ್ಟೋಬರ್ 2023, 4:05 IST
ಅಕ್ಷರ ಗಾತ್ರ

ಕಾರವಾರ: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆಯಲಿರುವ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಮಂಗಳವಾರ ತೆರಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಸ್ ಸಂಚರಿಸಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಬಸ್ ಏರಿದರು.

ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಹಿಳೆಯರಾಗಿದ್ದು ಅವರು ಆಧಾರ್ ಕಾರ್ಡ್ ತೋರಿಸಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆದರು. ಆದರೆ, ಜಿಲ್ಲಧಿಕಾರಿ ಗಂಗೂಬಾಯಿ ಮಾನಕರ್ ಮಾತ್ರ ಹಣ ನೀಡಿ ಟಿಕೆಟ್ ಪಡೆದರು.

ಪುರುಷ ಅಧಿಕಾರಿಗಳು ಟಿಕೆಟ್ ಖರೀದಿಸಿ ಪ್ರಯಾಣಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶಗೋಪು ರಜಪೂತ್ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಬಸ್ ನಲ್ಲಿದ್ದರು.

'ಸರ್ಕಾರದ ಸೂಚನೆಯಂತೆ ಪ್ರತಿ 15 ದಿನಕ್ಕೊಮ್ಮೆ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಯಲಿದೆ. ಪ್ರತಿ ಇಲಾಖೆಗಳ ವಾಹನಗಳನ್ನು ಬಳಸಿ ಸಾಗಿದರೆ ಇಂಧನ ವೆಚ್ಚ ಸೇರಿದಂತೆ ಅನಗತ್ಯ ಖರ್ಚು ಹೆಚ್ಚುತ್ತದೆ. ಹಣದ ಉಳಿತಾಯದ ಜತೆಗೆ ಎಲ್ಲ ಅಧಿಕಾರಿಗಳೂ ಏಕಕಾಲಕ್ಕೆ ತೆರಳುವ ಉದ್ದೇಶಕ್ಕೆ ಬಸ್ ಪ್ರಯಾಣ ಮಾಡಲು ನಿರ್ಧರಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT