ಕಾರವಾರ: ಇಲ್ಲಿನ ಶಿಲ್ಪ ಉದ್ಯಾನ (ರಾಕ್ ಗಾರ್ಡನ್) ಸಮೀಪ ಪಹರೆ ವೇದಿಕೆ ವತಿಯಿಂದ ಶನಿವಾರ ಬೆಳಿಗ್ಗೆ ಬೃಹತ್ ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ನಿರುಪಯುಕ್ತ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.

ವೇದಿಕೆ ಕಾರ್ಯಕರ್ತರು ಸ್ವಚ್ಛತೆ ಮಾಡುವಾಗ ಗಮನಿಸಿದ ವಿವಿಧ ಸಂಘಟನೆಯವರು ಸ್ವಚ್ಛತೆ ಕಾರ್ಯಕ್ಕೆ ಕೈಜೋಡಿಸಿದರು. ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ನೌಕರರ ಒಕ್ಕೂಟ, ಇನ್ನರ್ ವೀಲ್ ಕ್ಲಬ್, ಪಹರೆ ವೇದಿಕೆ ವಿಜಯ ನಗರ ಹಾಗೂ ಸದಾಶಿವಗಡ ಘಟಕ, ಕೋಡಿಭಾಗದ ಪತಂಜಲಿ ಯೋಗ ತಂಡ, ಬೀಚ್ ವಾಲಿಬಾಲ್ ಆಟಗಾರರ ತಂಡ ಸೇರಿದಂತೆ ಸುಮಾರು 250ಕ್ಕೂ ಅಧಿಕ ಜನರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

‘ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಿರುವ ಸ್ಥಳದ ಪಕ್ಕದಲ್ಲೇ ಗಿಡಗಂಟಿಗಳು ಬೆಳೆದು ಈ ಸ್ಥಳ ಕಸ ಎಸೆಯುವ ತಾಣವಾಗಿ ಮಾರ್ಪಟ್ಟಿತ್ತು. ವೇದಿಕೆ ಸದಸ್ಯರು, ಸಾರ್ವಜನಿಕರು ಸೇರಿ ಶುಚಿಗೊಳಿಸಿದ್ದೇವೆ. ಮುಂದಿನ ಶನಿವಾರವೂ ಇದೇ ಸ್ಥಳದಲ್ಲಿ ಸ್ವಚ್ಛತೆ ಮುಂದುವರಿಸಲಿದ್ದೇವೆ’ ಎಂದು ಪಹರೆ ವೇದಿಕೆಯ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.