ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಅಕ್ರಮ ಸಾಗಾಟ: ಇಬ್ಬರ ಬಂಧನ

Published 7 ಜೂನ್ 2024, 14:07 IST
Last Updated 7 ಜೂನ್ 2024, 14:07 IST
ಅಕ್ಷರ ಗಾತ್ರ

ಕುಮಟಾ: ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಬೊಲೆರೋ ವಾಹನದಲ್ಲಿ ಹಿಂಸಾತ್ಮಾಕ ರೀತಿಯಲ್ಲಿ, ಅಕ್ರಮವಾಗಿ ಭಟ್ಕಳ ಕಡೆ ಸಾಗಿಸುತ್ತಿದ್ದ ಎರಡು ಎತ್ತುಗಳನ್ನು ತಾಲ್ಲೂಕಿನ ಹೊಳೆಗದ್ದೆ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಶುಕ್ರವಾರ ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಲಕ್ಷ್ಮೇಶ್ವರ ತಾಲ್ಲೂಕಿನ ಆಸಿಫ್ ಸಾಬ್ (27), ಬಸವರಾಜ ಶಿಳ್ಳೇಕ್ಯಾತ್ (20) ಎಂಬುವವರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಭಟ್ಕಳದ ಅಬ್ದುಲ್ ಸಲಾಂ ನಿಜಾಮುದ್ದೀನ್‌ಗಾಗಿ ಪತ್ತೆ ಕಾರ್ಯ ನಡೆದಿದೆ.

ಎರಡು ಎತ್ತುಗಳ ಮೌಲ್ಯ ₹80 ಸಾವಿರ ಎಂದು ಅಂದಾಜಿಸಲಾಗಿದ್ದು, ಅವುಗಳನ್ನು ಸಾಗಿಸಗುತ್ತಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಮಂಜುನಾಥ ಗೌಡರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT