ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ | ಗಾಂಗೋಡಾದಲ್ಲಿ ಶಾಲೆ ಗೋಡೆ ಕುಸಿತ

Published 24 ಜುಲೈ 2023, 7:43 IST
Last Updated 24 ಜುಲೈ 2023, 7:43 IST
ಅಕ್ಷರ ಗಾತ್ರ

ಜೊಯಿಡಾ: ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಗಾಂಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಾಪೋಲಿ (ಕೆ) ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾನುವಾರ ರಾತ್ರಿ ಕುಸಿದಿದೆ. ರಾತ್ರಿಯ ವೇಳೆ ಗೋಡೆ ಕುಸಿದಿರುವುದರಿಂದ ಅಪಾಯ ತಪ್ಪಿದೆ.

ಇಲ್ಲಿ ಒಟ್ಟು ಮೂರು ಕೊಠಡಿಗಳಿದ್ದು 1 ರಿಂದ 7 ನೇ ತರಗತಿಯ ವರೆಗೆ ಇಲ್ಲಿ 51 ವಿದ್ಯಾರ್ಥಿಗಳು ಓದುತ್ತಿದ್ದು ಗೋಡೆ ಕುಸಿದ ಶಾಲೆಯಲ್ಲಿ 20 ವಿದ್ಯಾರ್ಥಿಗಳಿಗೆ ತರಗತಿ ನಡಿಸಲಾಗುತ್ತಿತ್ತು.

ಶಾಲೆಗೆ ಇರುವ ಮೂರು ಕೊಠಡಿಗಳು ಹಳೆಯದಾಗಿದ್ದು ,ದುರಸ್ಥಿ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದರು.

ಸ್ಥಳಕ್ಕೆ ಗಾಂಗೋಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

'ಶಾಲೆಗೆ ಹೊಸ ಕೊಠಡಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಂದಿದೆ. ಜಾಗದ ಕೊರತೆ ಹಾಗೂ ಜಾಗದ ತಕರಾರು ಇರುವುದರಿಂದ ಕೊಠಡಿ ನಿರ್ಮಾಣ ಆಗಿಲ್ಲ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸೀರ್ ಅಹ್ಮದ್ ಶೇಖ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT