ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗಡೆ ತತ್ವಾದರ್ಶ ಸಹಕಾರಿಗಳಿಗೆ ದಾರಿದೀಪ: ಎಚ್.ಕೆ.ಪಾಟೀಲ

Published 18 ಫೆಬ್ರುವರಿ 2024, 15:25 IST
Last Updated 18 ಫೆಬ್ರುವರಿ 2024, 15:25 IST
ಅಕ್ಷರ ಗಾತ್ರ

ಶಿರಸಿ: ಅಜಾತಶತ್ರು ಆಗಿದ್ದ ಸಹಕಾರಿ ರತ್ನ ದಿವಂಗತ ಶಾಂತಾರಾಮ ಹೆಗಡೆ ತತ್ವಾದರ್ಶ ಸಹಕಾರಿಗಳಿಗೆ ದಾರಿದೀಪವಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. 

ನಗರದ ಟಿಆರ್ಸಿ ಸಭಾಂಗಣದಲ್ಲಿ ಶಾಂತಾರಾಮ ಹೆಗಡೆ ಸ್ಮರಣಾರ್ಥ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವೆಲ್ ಫೇರ್ ಟ್ರಸ್ಟ್ ಆಯೋಜಿಸಿದ್ದ ನುಡಿನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿನ ಸೇವೆ, ಸರಳತೆ, ಸಂಸ್ಥೆ ಬೆಳೆಯಬೇಕಾದರೆ ಸಾಕಷ್ಟು ತ್ಯಾಗ ಇರುತ್ತದೆ. ಗಂಭೀರ ಮಾರ್ಗದರ್ಶನ ಜತೆಯಲ್ಲಿ ಜನರನ್ನು ಒಂದುಗೂಡಿಸಿಕೊಂಡು ಹೋಗಬೇಕಾಗುತ್ತದೆ. ಅಡಿಕೆ ಬೆಳೆಗಾರರು ಮಾರಾಟ ಮಾಡಬೇಕಾದರೆ ಮತ್ತು ಖರೀದಿ ಮಾಡುವ ಶೋಷಣೆಗೆ ಒಳಗಾಗಬಾರದು ಎಂದು ಹೇಳಿದ್ದ ಶ್ರೇಷ್ಠ ವ್ಯಕ್ತಿ ವರಾಗಿದ್ದರು. ಈ ಕಾರಣಕ್ಕೆ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು. 

ಶಾಸಕ ಆರ್.ವಿ.ದೇಶಪಾಂಡೆ ಮಶತನಾಡಿ, ಸಹಕಾರಿ ಕ್ಷೇತ್ರವೊಂದೇ ಅಲ್ಲದೆ ಆರೋಗ್ಯ, ಶಿಕ್ಷಣ, ಧಾರ್ಮಿಕ, ಕಲೆ ಇತ್ಯಾದಿ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ನೀಡಿದ್ದರು. ನಾವೀಗ ಸಹಕಾರಿ ರತ್ನವನ್ನು ಕಳೆದುಕೊಂಡಿದ್ದೇವೆ. ಅವರ ನಗು ಮುಖದ ಸಮಾಜ ಸೇವೆ ಅವರನ್ನು ಸದಾ ಸ್ಮರಿಸುವಂತೆ ಮಾಡಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ವ್ಯಕ್ತಿಯು ಮಾಡಿದ ಕಾರ್ಯವು ಆತನ ಕಾಲಾನಂತರವೂ ಮಾರ್ಗದರ್ಶನ ನೀಡುವಂತೆ, ಇತರರಿಗೆ ಪ್ರೇರಣೆ ನೀಡುವಂತಿರಬೇಕು. ಅಂಥ ಕಾರ್ಯವನ್ನು ಶಾಂತಾರಾಮ ಹೆಗಡೆ ಮಾಡಿದ್ದಾರೆ ಎಂದರು. ಅವರು ಕಂಡ ಮಾದರಿ ಸಹಕಾರಿ ಕ್ಷೇತ್ರದ ಕನಸನ್ನು ಸಹಕಾರಿಗಳು ನನಸು ಮಾಡುವ ಅಗತ್ಯವಿದೆ ಎಂದು ಹೇಳಿದರು. 

ಇದೇ ವೇಳೆ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಸಾಧನಾ ಪಥದ ಕಿರುಚಿತ್ರ ಪ್ರದರ್ಶನ ನಡೆಯಿತು. ಟ್ರಸ್ಟ್ ಅಧ್ಯಕ್ಷ ಎಸ್.ಕೆ.ಭಾಗವತ, ಪ್ರಮುಖರಾದ ಶಶಾಂಕ ಹೆಗಡೆ ಶೀಗೇಹಳ್ಳಿ, ಶಂಭುಲಿಂಗ ಹೆಗಡೆ, ರಾಮಕೃಷ್ಣ ಹೆಗಡೆ ಕಡವೆ,  ವಿಶ್ವಾಸ ಬಲಸೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವೆಂಕಟೇಶ ಹೆಗಡೆ ಹೊಸಬಾಳೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT