ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮನೆಯಿಂದಲೇ ಮತ ನೀಡಿದ ಶತಾಯುಷಿ

Published 25 ಏಪ್ರಿಲ್ 2024, 14:35 IST
Last Updated 25 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಗುರುವಾರದಿಂದ ಹಿರಿಯ ನಾಗರಿಕರು, ಅಂಗವಿಕಲ ಮತದಾರರು ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲ ದಿನ ಶತಾಯುಷಿಗಳು ಸೇರಿದಂತೆ ಹಲವರು ಮತದಾನ ಮಾಡಿ ಖುಷಿಪಟ್ಟರು.

ಯಲ್ಲಾಪುರದಲ್ಲಿ 104 ವರ್ಷದ ಸುಬ್ಬಿ ಗೋಪಾಲಕೃಷ್ಣ ಭಟ್ ಮತದಾನ ಮಾಡಿ ಗಮನಸೆಳೆದರು. ಕಾರವಾರ ನಗರದ ಆಯುಷ್ ಆಸ್ಪತ್ರೆ ಬಳಿಯ ನಾಗಿ ಸುಕ್ರಿ ಶಿರಾಲಿಕರ್ ಎಂಬ 87 ವರ್ಷದ ವೃದ್ದೆ ಯಾರ ನೆರವು ಪಡೆಯದೇ ಮತದಾನ ಮಾಡಿದರು. ನಂತರ ಮಾತನಾಡಿದ ಅವರು ಅನಾರೋಗ್ಯದ ಕಾರಣ ನಡೆಯಲು ಸಾಧ್ಯವಿಲ್ಲವಾಗಿದ್ದು ಮನೆ ಬಳಿಗೆ ನನ್ನ ಬಂದು ನನ್ನ ಮತ ಪಡೆದದ್ದಕ್ಕೆ ಕೃತಜ್ಞತೆ ಅರ್ಪಿಸಿದರು.

ಇದೇ ಪ್ರದೇಶದ ವ್ಯಾಪ್ತಿಯ 92 ವರ್ಷದ ವಯೋವೃದ್ದೆ ಸೋಮಾಯಿ ಲೋಕಪ್ಪ ಚಂಡೆಕರ್ ಯಾರ ಸಹಾಯವೂ ಪಡೆಯದೇ, ತಮಗೆ ಮತದಾನ ಮಾಡಿಸಲು ಬಂದ ಸಿಬ್ಬಂದಿಗೆ ಪ್ರೀತಿಯಿಂದ ಕೈಮುಗಿದರು. ಸಾಯಿ ಮಂದಿರದ ಬಳಿಯ 30 ವರ್ಷದ ಸಂತೋಷ್ ಎಂಬ ಅಂಗವಿಕಲ ಯುವಕ ಹಾಸಿಗೆ ಮೇಲೆ ಮಲಗಿಯೇ ತನ್ನ ತಾಯಿಯಿ ನೆರವನಿಂದ ಮತ ಚಲಾಯಿಸಿದರು.

ಜಿಲ್ಲೆಯಲ್ಲಿ 3,046 ಹಿರಿಯ ನಾಗರಿಕರು, 1,977 ಅಂಗವಿಕಲ ಮತದಾರರು ಮನೆಯಿಂದಲೇ ಮತ ಚಲಾಯಿಸಬೇಕಿದ್ದು, ಏ.30ರ ವರೆಗೆ ಪ್ರಕ್ರಿಯೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT