ವಿಶೇಷ ಘಟಕ ಯೋಜನೆ (ಎಸ್ಸಿಪಿ) ಹಾಗೂ ಬುಡಕಟ್ಟು ವಿಶೇಷ ಘಟಕ ಯೋಜನೆ (ಟಿಎಸ್ಪಿ) ಅಡಿಯಲ್ಲಿ ಈ ಕಟ್ಟಡಗಳು ನಿರ್ಮಾಣವಾಗಿವೆ. ಕಾರವಾರ, ಹೊನ್ನಾವರ, ಭಟ್ಕಳ, ಅಂಕೋಲಾ, ಮುಂಡಗೋಡ, ಶಿರಸಿ, ಹಳಿಯಾಳ, ಸಿದ್ದಾಪುರ ತಾಲ್ಲೂಕುಗಳಲ್ಲಿ ಈಗಾಗಲೇ ಉದ್ಘಾಟನೆಯಾಗಿವೆ. ಆದರೆ, ಈವರೆಗೂ ಮೂಲಸೌಕರ್ಯ ಕಲ್ಪಿಸದ ಕಾರಣ ಅವು ಪಾಳು ಬಿದ್ದಿವೆ.