ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂದ ಗಣೇಶ

Last Updated 18 ಆಗಸ್ಟ್ 2013, 10:59 IST
ಅಕ್ಷರ ಗಾತ್ರ

ಗಣೇಶ ಚೌತಿಗೆ ಇನ್ನೂ ಒಂದು ತಿಂಗಳು ಇರುವಾಗಲೇ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಗಣೇಶ ವಿಗ್ರಹಗಳನ್ನು ಸಾವಿರಾರು ಸಂಖ್ಯೆಯಲ್ಲಿ ದಾಂಡೇಲಿ ಮಾರುಕಟ್ಟೆಗೆ ತರಲಾಗಿದೆ.

ಎರಡು ಅಡಿಯಿಂದ ಅತಿ ಚಿಕ್ಕ ಅಳತೆಗಳಲ್ಲಿ ಲಭ್ಯವಿರುವ ಈ ವಿಗ್ರಹಗಳನ್ನು ವರ್ಷವಿಡೀ ತಯಾರಿಸಲಾಗುತ್ತದೆ. ಅಲ್ಲದೇ, ಹಬ್ಬ ಸಮೀಪಿಸುತ್ತಿದ್ದಂತೆ ವಿಗ್ರಹಗಳಿಗೆ ಬಣ್ಣ ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಹಬ್ಬದ ನಿಮಿತ್ತ ಮನೆಗಳಲ್ಲಿ ಪೂಜಿಸಲು ಗ್ರಾಹಕರು ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನೇ ಇಂದಿಗೂ ಇಲ್ಲಿ ಖರೀದಿಸುತ್ತಾರೆ.

ಇವುಗಳನ್ನು ತಂದು ಮಾರಾಟ ಮಾಡುವ ವ್ಯಾಪಾರಸ್ಥರೂ ಕೂಡಾ ಬೆಳಗಾವಿ ಖಾನಾಪುರ ಗ್ರಾಮಾಂತರ ಪ್ರದೇಶಗಳಲ್ಲಿ ತಯಾರಿಸಲ್ಪಡುವ ಈ ಮೂರ್ತಿಗಳಿಗಾಗಿ ವರ್ಷ ಮೊದಲೇ ತಮ್ಮ ಬೇಡಿಕೆಯನ್ನು ಇಟ್ಟಿರುತ್ತಾರೆ. ಮೂರ್ತಿಗಳ ಸಾಗಾಟದ ವೇಳೆ ಜಖಂಗೊಳ್ಳದಂತೆ ಕಟ್ಟಿಗೆ ಪುಡಿಯಲ್ಲಿ ಮೂರ್ತಿಗಳನ್ನು ಪ್ಯಾಂಕಿಂಗ್ ಮಾಡಲಾಗಿರುತ್ತದೆ.

`ದಾಂಡೇಲಿ ಮಾರುಕಟ್ಟೆಯಲ್ಲಿ ಶೇ 80ರಷ್ಟು ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳೇ ಮಾರಾಟವಾಗುತ್ತವೆ' ಎಂದು ವ್ಯಾಪಾರಸ್ಥರೊಬ್ಬರು ಹೇಳಿದರು.

ಬಹುವರ್ಷಗಳಿಂದ ಈ ಮೂರ್ತಿಗಳಿಗೆ ಇಲ್ಲಿ ಬೇಡಿಕೆ ಇರುವುದರಿಂದ ದಾಂಡೇಲಿ ಸೇರಿದಂತೆ ಹಳಿಯಾಳ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಪಾರಂಪರಿಕ ಶೈಲಿಯ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾಡುವ ಅನೇಕ ಕುಟುಂಬಗಳಿವೆ. ಸಾಮಾನ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಸಾರ್ವಜನಿಕ ಗಣಪತಿಗಳನ್ನು ಹೊರತುಪಡಿಸಿದರೆ ಈ ಪಾರಂಪರಿಕ ಶೈಲಿಯ ಗಣೇಶ ವಿಗ್ರಹಗಳನ್ನೇ  ಖಾಸಗಿಯವರು ಪೂಜೆಗಾಗಿ ಖರೀದಿಸುತ್ತಾರೆ.

ಈಗಾಗಲೇ ನಗರದ ಲಿಂಕ್ ರಸ್ತೆ ಮಾರುಕಟ್ಟೆಯ ಕೆಲವು ಅಂಗಡಿಗಳಲ್ಲಿ ಎತ್ತರ ಪ್ರಕಾರವಾಗಿ ಗಣಪತಿ ಮೂರ್ತಿಗಳನ್ನು ಜೋಡಿಸಿಟ್ಟದ್ದು ಜನಾಕರ್ಷಣೆಗೆ ಕಾರಣವಾಗಿದೆ. ತಿಂಗಳು ಮುಂಚೆಯೇ ತಮ್ಮ ಇಷ್ಟದ ಗಣಪತಿ ಮೂರ್ತಿಯನ್ನು ಆಯ್ಕೆಮಾಡಿ ಮುಂಗಡ ಹಣ ನೀಡಿ ಗ್ರಾಹಕರು ಮೂರ್ತಿಗಳಿಗೆ ಕ್ರಮಸಂಖ್ಯೆ ಹಾಕಿಸುತ್ತಿದ್ದಾರೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಗಣಪತಿ ಮೂರ್ತಿ ಮಾರಾಟ ಮಳಿಗೆಗಳು ಜನಮನ ಸೆಳೆಯುತ್ತಿರುವುದರಿಂದ ಹಬ್ಬದ ವಾತಾವರಣಕ್ಕೆ ನಾಂದಿಯಾದಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT