‘ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ನಂತರವೂ ಮರಮುಟ್ಟುಗಳ ಖರೀದಿಗೆ ಇ– ಟೆಂಡರ್ ವ್ಯವಸ್ಥೆಯಲ್ಲಿ ಶೇ 12ರಷ್ಟು ಎಫ್ಡಿಎಫ್ ಅನ್ನು ಗುತ್ತಿಗೆದಾರರಿಂದ ಸಂಗ್ರಹಿಸಲಾಗುತ್ತಿತ್ತು. ಜತೆಗೆ ಮರಮುಟ್ಟು ಖರೀದಿದಾರರಿಂದ ಶೇ 18ರಷ್ಟು ಜಿಎಸ್ಟಿ, ಶೇ 12ರಷ್ಟು ಅಭಿವೃದ್ಧಿ ಶುಲ್ಕ ಹಾಗೂ ಶೇ 2.5ರಷ್ಟು ಇತರ ಶುಲ್ಕ ಸೇರಿ ಒಟ್ಟು ಶೇ 32.5ರಷ್ಟು ತೆರಿಗೆಯ ಬದಲು ಶೇ 34.96ರಷ್ಟನ್ನು ಪಡೆಯಲಾಗುತ್ತಿತ್ತು.