ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ವಕೀಲರ ಪರಿಷತ್ತಿನ 25 ಸ್ಥಾನಗಳಿಗೆ 99 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚುನಾವಣೆಯ ಅಧಿಕಾರಿಯಾಗಿ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯದರ್ಶಿ ಆರ್.ಆರ್.ಹೆಗಡೆ, ಮಂಜುನಾಥ ಕೆ.ಎಸ್., ಮಧುಕೇಶ್ವರ ನಾಯ್ಕ ಭಾಗವಹಿಸಿದ್ದರು.