ಪತ್ನಿ ರೂಪಾ ಜೊತೆ ಮನೆ ಪ್ರವೇಶಿಸಿದ ಅನಂತಕುಮಾರ ತಂದೆ ತಾಯಿ ಕಾಲಿಗೆರಗಿ ನಮಸ್ಕರಿಸಿದರು. ಶಿರಸಿ ತಾಲ್ಲೂಕಿನ ಗಡಿಯಲ್ಲಿ ಸಚಿವರನ್ನು ಬರಮಾಡಿಕೊಂಡ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಶಿರಸಿಗೆ ಕರೆದುಕೊಂಡು ಬಂದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರು ಹಾರ ಹಾಕಿ, ಹೂಗುಚ್ಛ ನೀಡಿ ಸಚಿವರನ್ನು ಬರಮಾಡಿಕೊಂಡರು. ಸಚಿವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ