ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ: ಉತ್ತಮ ಮಳೆ

Published 18 ಮೇ 2024, 15:15 IST
Last Updated 18 ಮೇ 2024, 15:15 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ) : ಹೋಬಳಿಯ ಗಡಿಭಾಗದಲ್ಲಿ ಶನಿವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಶುರುವಾದ ಮಳೆ 20 ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು. ಕೆಲ ದಿನಗಳಿಂದ ಅರಸೀಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಗಡಿ ಭಾಗದಲ್ಲಿ ಮಳೆ ಆಗಿರಲಿಲ್ಲ.

ಹಿರೇಮೆಗಳಗೆರೆ, ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಲ, ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಬಹುದಿನಗಳಿಂದ ಹೂಳು ತುಂಬಿದ್ದ ಚರಂಡಿಗಳು ಸ್ವಚ್ಛಗೊಂಡವು.

‘ಗಡಿ ಭಾಗದಲ್ಲಿ ಸುರಿದ ಮಳೆ ರೈತಾಪಿ ವರ್ಗಕ್ಕೆ ಆಶಾದಾಯಕವಾಗಿದೆ. ಮಳೆ ಕೊರತೆಯಿಂದ ಕಂಗಾಲಾಗಿದ್ದ ಅಡಿಕೆ ಬೆಳೆಗಾರರಿಗೆ ಮಳೆ ಜೀವಾಮೃತವಾಗಿ ಪರಿಣಮಿಸಿದೆ’ ಎಂದು ರೈತ ಫಣಿಯಾಪುರ ಲಿಂಗರಾಜ ಹರ್ಷ ವ್ಯಕ್ತಪಡಿಸಿದರು.

ಅರಸೀಕೆರೆ ಹೋಬಳಿ ಗಡಿಭಾಗದ ಫಣಿಯಾಪುರ ಗ್ರಾಮದ ಹೊರ ವಲಯದ ಹೊಲವೊಂದರಲ್ಲಿ ಶನಿವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ.ಅರಸೀಕೆರೆ ಹೋಬಳಿ ಗಡಿಭಾಗದ ಫಣಿಯಾಪುರ ಗ್ರಾಮದ ಹೊರ ವಲಯದ ಹೊಲವೊಂದರಲ್ಲಿ ಶನಿವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ.
ಅರಸೀಕೆರೆ ಹೋಬಳಿ ಗಡಿಭಾಗದ ಫಣಿಯಾಪುರ ಗ್ರಾಮದ ಹೊರ ವಲಯದ ಹೊಲವೊಂದರಲ್ಲಿ ಶನಿವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ.ಅರಸೀಕೆರೆ ಹೋಬಳಿ ಗಡಿಭಾಗದ ಫಣಿಯಾಪುರ ಗ್ರಾಮದ ಹೊರ ವಲಯದ ಹೊಲವೊಂದರಲ್ಲಿ ಶನಿವಾರ ಸುರಿದ ಮಳೆಗೆ ನೀರು ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT