ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಇತಿಹಾಸ ಕಟ್ಟಿಕೊಟ್ಟ ಧ್ವನಿ–ಬೆಳಕು

ಕರಿಬಸವರಾಜ ಜಿ.
Published 3 ಫೆಬ್ರುವರಿ 2024, 6:13 IST
Last Updated 3 ಫೆಬ್ರುವರಿ 2024, 6:13 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ಕತ್ತಿ ಝಳಪಿಸುವ ಕಾಳಗ, ವೈರಿ ಸೈನ್ಯವನ್ನು ಹಿಮ್ಮೆಟ್ಟಿಸುವ ಸೈನಿಕರು, ಟಕ್ ಟಕ್ ಕುದುರೆಗಳ ಓಡಾಟದ ಸದ್ದು, ಗಜಪಡೆಯ ಗರ್ಜನೆ...

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹಂಪಿಯ ಆನೆ ಸಾಲು ಹಾಗೂ ಕುದುರೆ ಸಾಲು ಬಳಿ ಶುಕ್ರವಾರ ರಾತ್ರಿ ನಡೆದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ‌ ಕಂಡ ದೃಶ್ಯಗಳಿವು.

ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ, ರಥಬೀದಿಯಲ್ಲಿ ವಜ್ರ ವೈಡೂರ್ಯ ಮಾರಾಟ, ಶ್ರೀಕೃಷ್ಣದೇವರಾಯರ ಕುಸ್ತಿ ಪಂದ್ಯಾವಳಿ, ಸೈನಿಕರ ಓಡಾಟ ಸೇರಿದಂತೆ ಹಂಪಿಯ ಸ್ಮಾರಕಗಳು ಧ್ವನಿ ಬೆಳಕಿನಲ್ಲಿ ಮೂಡಿಬಂದವು.

ಹರಿ ಹರ ಹಕ್ಕ ಬುಕ್ಕರಿಂದ, ರಾಮರಾಯರು ಸೇರಿದಂತೆ ಪ್ರೌಢದೇವರಾಯರು, ಶ್ರೀಕೃಷ್ಣ ದೇವರಾಯರ ಇತಿಹಾಸ ಸೇರಿದಂತೆ ತುಳು, ಸಂಗಮ, ಅರವೀಡು, ಸಾಳವ ವಂಶದಿಂದ 229 ವರ್ಷಗಳ ಇತಿಹಾಸ ಧ್ವನಿ ಮತ್ತು ಬೆಳಕಿನ ನಡುವೆ ವಿಜಯನಗರ ವೈಭವ ಮರುಕಳಿಸಿದವು.

ಮುಖ್ಯ ವೇದಿಕೆಯಿಂದ ಜ್ಯೋತಿ ತಂದ ಬಳಿಕ ರಾತ್ರಿ 9 ಗಂಟೆಗೆ ಕಾರ್ಯಕ್ರಮಕ್ಕೆ ಕೇಂದ್ರ ಸಂವಹನ ಇಲಾಖೆಯ ಸಹಾಯಕ ನಿರ್ದೇಶಕ ಜಯ ಕುಮಾರ್, ರಂಗ ನಿರ್ದೇಶಕ ಜಿತೇಂದ್ರ ಪಾನ್ ಪಾಟೀಲ್, ತೋರಣಗಲ್ಲಿನ‌ ವಾಡ ಆಯುಕ್ತ ಎಲ್.ಡಿ. ಜೋಷಿ, ನೃತ್ಯ ಸಂಯೋಜಕಿ ಮಾದವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಳಿಯದ ಜನ: ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಏಳು ದಿನ ನಡೆಯುವ ಕಾರಣಕ್ಕೆ ಮೊದಲ ದಿನವಾದ ಶುಕ್ರವಾರ ಕಾರ್ಯಕ್ರಮದತ್ತ ಬರುವ ಜನರ ಸಂಖ್ಯೆ ಕಡಿಮೆ ಇತ್ತು. ಕುರ್ಚಿಗಳು ಖಾಲಿಖಾಲಿಯಾಗಿದ್ದವು.

ಮುಖ್ಯ ವೇದಿಕೆಯಲ್ಲಿ ಚಲನಚಿತ್ರ ನಟರು, ಗಣ್ಯರು ಬಂದಿದ್ದರಿಂದ, ಬೇರೊಂದು ದಿನ ಈ ಕಾರ್ಯಕ್ರಮವನ್ನು ನೋಡಲು ಅವಕಾಶವಿದೆ ಎಂದು ಜನ ಬಂದಿಲ್ಲ ಎಂದು ಪ್ರೇಕ್ಷಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT