ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು: ಶಾಸಕರಿಂದ ಚೆಕ್ ವಿತರಣೆ

Published 9 ಜೂನ್ 2024, 7:08 IST
Last Updated 9 ಜೂನ್ 2024, 7:08 IST
ಅಕ್ಷರ ಗಾತ್ರ

ಕೊಟ್ಟೂರು: ತಾಲ್ಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಕಳೆದ ವಾರ ಸಿಡಿಲು ಬಡಿದು ಮೃತಪಟ್ಟಿ ಮದ್ದಾನಪ್ಪ ಎಂಬ ಯುವಕನ ಮನೆಗೆ ಶಾಸಕ ಕೆ.ನೇಮರಾಜನಾಯ್ಕ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ₹5 ಲಕ್ಷ ಹಣದ ಚೆಕ್ ವಿತರಿಸಿದರು.

‘ಮಳೆಗಾಲದಲ್ಲಿ ಕುರಿಗಾಹಿಗಳು, ಹೊಲದಲ್ಲಿ ಕೆಲಸ ನಿರ್ವಹಿಸುವವರು ತುಂಬಾ ಜಾಗರೂಕರಾಗಿರಬೇಕು. ಮಳೆ ಬರುವ ಮುನ್ಸೂಚನೆ ಇದ್ದಲ್ಲಿ ಮನೆ ಸೇರುವುದು ಒಳಿತು ಮತ್ತು ಮಳೆ ಬರುವಾಗ ಮರದ ಕೆಳಗಡೆ ನಿಲ್ಲಬಾರದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಂ.ಜೆ ಹರ್ಷವರ್ಧನ್, ತಹಶೀಲ್ದಾರ್ ಜಿ.ಕೆ. ಅಮರೇಶ್, ಕಂದಾಯ ನಿರೀಕ್ಷಕ ಎಸ್.ಎಂ.ಹಾಲಸ್ವಾಮಿ, ವೈ.ಮಲ್ಲಿಕಾರ್ಜುನ್, ಕೋಗಳಿ ಕೊಟ್ರೇಶ್, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪರೆಡ್ಡಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT