ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭೇಟಿ: ಹಾರಾಡಲಾರದೇ ಬೃಹತ್‌ ರಾಷ್ಟಧ್ವಜ?

Published 28 ಏಪ್ರಿಲ್ 2024, 4:40 IST
Last Updated 28 ಏಪ್ರಿಲ್ 2024, 4:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಇರುವ ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು, ಈ ಸಂದರ್ಭದಲ್ಲಿ ಬೃಹತ್ ಸ್ತಂಭದ ಮೇಲೆ ರಾಷ್ಟ್ರಧ್ವಜ ಹಾರಾಡುವುದೇ ಎಂಬ ಕುತೂಹಲ ಹಲವರನ್ನು ಕಾಡಿದೆ.

ರಾಷ್ಟ್ರದ ಅತ್ಯುನ್ನತ ನಾಯಕ ರಾಷ್ಟ್ರದ ಅತ್ಯಂತ ಎತ್ತರದ ಧ್ವಜಸ್ತಂಭದ ಬುಡದಲ್ಲೇ ನಿಂತು ಮಾತನಾಡುವಾಗ ಧ್ವಜಸ್ತಂಭದ ಮೇಲೆ ಬೃಹತ್ ರಾಷ್ಟ್ರಧ್ವಜ ಹಾರಾಡುತ್ತಿದ್ದರೆ ಅದರ ಭವ್ಯತೆಯೇ ವಿಶಿಷ್ಟವಾಗಿರುತ್ತದೆ ಎಂದು ನಗರದ ವಾಸಿಗಳು ಅಭಿಪ್ರಾಯಟ್ಟಿದ್ದಾರೆ.

‘ಧ್ವಜಸ್ತಂಭಕ್ಕಾಗಿ ಸುಮಾರು ₹6 ಕೋಟಿ ನಮ್ಮ ತೆರಿಗೆ ಹಣವನ್ನು ವ್ಯಯಿಸಲಾಗಿದೆ. ವರ್ಷವಿಡೀ ರಾಷ್ಟ್ರಧ್ವಜ ಹಾರಾಡುತ್ತಿರಬೇಕು ಎಂಬ ಕಾರಣಕ್ಕೇ ಇಷ್ಟು ದೊಡ್ಡ ಧ್ವಜಸ್ತಂಭ ನಿರ್ಮಿಸಲಾಗಿದೆ. ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಮಾತ್ರವಲ್ಲ ವರ್ಷವಿಡೀ ರಾಷ್ಟ್ರಧ್ವಜ ಹಾರಾಡಬೇಕು ಎಂಬುದು ನಮ್ಮ ಒತ್ತಾಯ. ತಪ್ಪಿದಲ್ಲಿ ಇದು ನಮ್ಮ ತೆರಿಗೆ ಹಣಕ್ಕೆ ಮಾಡಿದಂತಹ ಮೋಸ ಎಂದೇ ಹೇಳಬೇಕಾಗುತ್ತದೆ’ ಎಂದು ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಮೇಶ್ ದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT