ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ: ವಿಜಯನಗರ ಜಿಲ್ಲೆಯಲ್ಲಿ ಶೇ73.76ರಷ್ಟು ಮತದಾನ

Published 3 ಜೂನ್ 2024, 14:02 IST
Last Updated 3 ಜೂನ್ 2024, 14:02 IST
ಅಕ್ಷರ ಗಾತ್ರ

ಹೊಸಪೇಟೆ: ವಿಧಾನ ಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಶೇ 73.76ರಷ್ಟು ಮತದಾನವಾಗಿದೆ.

ಒಟ್ಟು 18,233 ಮತದಾರರ ಪೈಕಿ 13,449 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 11,895 ಪುರುಷ ಮತದಾರರ ಪೈಕಿ 9,012 ಮಂದಿ (ಶೇ 75.76), 6,336 ಮಹಿಳಾ ಮತದಾರರ ಪೈಕಿ 4,436 ಮಂದಿ (ಶೇ 70.01) ಇತರೆ ಇಬ್ಬರು ಮತದಾರರ ಪೈಕಿ ಒಬ್ಬರು (ಶೇ 50) ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೋಮವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದರು.

ಜಿಲ್ಲೆಯ 21 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಹರಪನಹಳ್ಳಿಯಲ್ಲಿ ಬೆಳಿಗ್ಗೆ ಅಷ್ಟಾಗಿ ಮತೋತ್ಸಾಹ ಕಾಣಿಸದಿದ್ದರೂ, ಸಂಜೆ ಅಧಿಕ ಸಂಖ್ಯೆಯಲ್ಲಿ ಪದವೀಧರರ ಮತಗಟ್ಟೆಯತ್ತ ಬಂದು ಮತ ಚಲಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT