ನಗರದ ಎ.ಪಿ.ಎಂ.ಸಿ ವೃತ್ತದಿಂದ ವಿಜಯನಗರ ಕಾಲೇಜು ಮೈದಾನದವರೆಗೆ ನಡೆದ ಸಿರಿಧಾನ್ಯ ನಡಿಗೆಯಲ್ಲಿ `ನಮ್ಮ ನಡಿಗೆ ಸಿರಿಧಾನ್ಯಗಳ ಕಡೆಗೆ, ಸಿರಿಧಾನ್ಯ ಸಿಂಗಾರ ಆರೋಗ್ಯ ಬಂಗಾರ, ಸಿರಿಧಾನ್ಯಗಳ ತಾಕತ್ತು ಸಕಲ ಪೌಷ್ಠಿಕಾಂಶಗಳ ಸಂಪತ್ತು, ಸಿರಿಧಾನ್ಯ ಬೆಳೆ ಇರಲಿ ಪ್ರೋತ್ಸಾಹ ಧನ ತರಲಿ, ಬರಗಾರದಲ್ಲೂ ಬಂಗಾರ ಸಿರಿಧಾನ್ಯ, ಸಿರಿಧಾನ್ಯ ಬಳಸಿರಿ ಆರೋಗ್ಯದಲ್ಲಿ ಸಿರಿವಂತರಾಗಿ, ಸಜ್ಜೆ ತಿಂದವರು ಉತ್ಸಾಹದ ಕಹಳೆ ಊದುವರು, ರಾಗಿ ತಿಂದವರು ರೋಗದಿಂದ ಮುಕ್ತರಾಗುವರು’ ಎಂಬ ಸಂದೇಶ ಫಲಕಗಳನ್ನು ಹಿಡಿದು ವಿಶೇಷ ಜಾಗೃತಿ ಮೂಡಿಸಲಾಯಿತು.