ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯ: ಕಾಶಿಯಲ್ಲೇ ಉಳಿದ ರಾಜ್ಯದ 350 ಮಂದಿ

Published 28 ಡಿಸೆಂಬರ್ 2023, 21:01 IST
Last Updated 28 ಡಿಸೆಂಬರ್ 2023, 21:01 IST
ಅಕ್ಷರ ಗಾತ್ರ

ಹೊಸಪೇಟೆ : ದಟ್ಟ ಮಂಜಿನಿಂದ ವಾರಾಣಸಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಕಾಶಿಗೆ ತೆರಳಿದ್ದ ರಾಜ್ಯದ 350 ಮಂದಿ ವಾಪಸ್‌ ಬರಲಾಗದೆ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದಾರೆ.

‘ವಿಜಯನಗರ ಜಿಲ್ಲೆಯಿಂದ ನಾವು 15 ಮಂದಿ ಕಾಶಿಗೆ ವಿಮಾನದಲ್ಲಿ ಬಂದಿದ್ದೆವು. ಆದರೆ ವಾಪಸ್ ಬರಲು ಸಾಧ್ಯವಾಗದೆ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದೇವೆ. ವಿಮಾನದಲ್ಲಿ ತ್ವರಿತವಾಗಿ ಕಾಶಿ ದರ್ಶನ ಮಾಡಿ, ಮರಳಲು ಬಯಸಿದ್ದೆವು. ಅದರೆ, ಅದು ಸಾಧ್ಯವಾಗುತ್ತಿಲ್ಲ’ ಎಂದು ಹೊಸಪೇಟೆಯ ತುಂಗಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲಿನಲ್ಲಿ ಹಿಂದಿರುಗೋಣ ಎಂದರೆ ಹಲವು ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. ಕೋಲ್ಕತ್ತಾ ಮೂಲಕ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಇದೀಗ ಹೇಳುತ್ತಿದ್ದಾರೆ’ ಎಂದರು.

ಹೊಸಪೇಟೆಯ ತುಂಗಾಬಾಯಿ ಜತೆಗೆ ಗುರುರಾಜ ಕುಲಕರ್ಣಿ, ಗುರುದತ್‌ ಕುಲಕರ್ಣಿ, ವೀರೇಶ್, ಅನಿಲ್ ಜೋಷಿ, ಸುಷ್ಮಾ, ಮೋಹನ್‌ರಾಜ್‌, ಹರೀಶ್, ಕೂಡ್ಲಿಗಿಯ ರಿಂದಪ್ಪ ಶೆಟ್ಟಿ, ಮೋಹನ್‌ ಕುಮಾರ್, ಪ್ರಸಾದ್ ಬಾಬು, ಆನಂದಪ್ಪ, ಸುಷ್ಮಿತಾ, ಸ್ಮಿತಾ ಮೊದಲಾದವರು ಊರಿಗೆ ಮರಳಲು ಕಾಯುತ್ತಿದ್ದಾರೆ.

ವಾರಾಣಸಿ ವಿಮಾನನಿಲ್ದಾಣದಲ್ಲಿ ವಿಮಾನಗಳಿಗೆ ಗುರುವಾರ ಕಾಯುತ್ತಿದ್ದ ಪ್ರಯಾಣಿಕರು
ವಾರಾಣಸಿ ವಿಮಾನನಿಲ್ದಾಣದಲ್ಲಿ ವಿಮಾನಗಳಿಗೆ ಗುರುವಾರ ಕಾಯುತ್ತಿದ್ದ ಪ್ರಯಾಣಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT