ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ | ಗುಡಿಸಲಿಗೆ ಬೆಂಕಿ: ಅಪಾರ ಹಾನಿ

Published 19 ಮಾರ್ಚ್ 2024, 14:21 IST
Last Updated 19 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ಇಂಡಿ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಹಾಗೂ ಜೋಳದ ಬಣವೆ ಸಂಪೂರ್ಣ ಸುಟ್ಟು ಕರಲಾದ ಘಟನೆ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಮಂಗಳವಾರ ನಡೆದಿದೆ.

ಧರೇಪ್ಪ ಮಲ್ಲಪ್ಪ ಮೇತ್ರಿ ಅವರ ಗುಡಿಸಲಿನಲ್ಲಿ ಮಧ್ಯಾಹ್ನ ಬೆಂಕಿ ತಗುಲಿದ್ದು, ಸುಮಾರು ಆರು ಚೀಲ ಜೋಳ ಹಾಗೂ ಜೋಳದ ಬಣವೆ ಬೆಂಕಿಯಿಂದ ಸುಮಾರು ₹60 ಸಾವಿರ ಬೆಲೆ ಬಾಳುವ ಜೋಳದ ಕಣಿಕೆ ಸುಟ್ಟು ಕರಕಲಾಗಿದೆ.

ಸುಮಾರು ₹1 ಲಕ್ಷಗಿಂತ ಹೆಚ್ಚು ಬೆಲೆಬಾಳುವ ಪಂಪ್‌ಸೆಟ್ ಹಾಗೂ ಪೈಪ್‌, ಕೇಬಲ್ ಸುಟ್ಟಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಡವಲಗಾ ಆಡಳಿತ ಅಧಿಕಾರಿ ಸಿದ್ದು ಪೂಜಾರಿ ಅವರು ಪಂಚನಾಮೆ ಮಾಡಿದ್ದಾರೆ. ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಹೊಸಮನಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ವಾಂತನ ಹೇಳಿ, ಸರ್ಕಾದಿಂದ ಬರುವ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT