ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ: ಕೃಷಿ ಮೇಳ ಡಿ.28ರಿಂದ

Published 28 ನವೆಂಬರ್ 2023, 14:24 IST
Last Updated 28 ನವೆಂಬರ್ 2023, 14:24 IST
ಅಕ್ಷರ ಗಾತ್ರ

ಸೋಲಾಪುರ: ಸಿದ್ದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಡಿ.28ರಿಂದ ಜ.1ರವರೆಗೆ 53ನೇ ರಾಜ್ಯಮಟ್ಟದ ಕೃಷಿ, ಔದ್ಯೋಗಿಕ, ವಾಹನ ಮಹೋತ್ಸವ ಹಾಗೂ ಪಶು ಪಕ್ಷಿಗಳ ಪ್ರದರ್ಶನವನ್ನು ಸಿದ್ದೇಶ್ವರ ದೇವಸ್ಥಾನದ ಹತ್ತಿರವಿರುವ ಹೋಂ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಿದ್ದೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ‘ಕೃಷಿ ಪ್ರದರ್ಶನದಲ್ಲಿ 300 ಮಳಿಗೆಗಳು ಇರಲಿವೆ. ಪ್ರದರ್ಶನದಲ್ಲಿ ರೈತರಿಗೆ ಒಂದೇ ಸ್ಥಳದಲ್ಲಿ ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಮಾಹಿತಿಗಳು ದೊರೆಯಲಿವೆ. ಸರ್ಕಾರದ ಕೃಷಿ ವಿಭಾಗದಿಂದ ದೊರೆಯುವ ಯೋಜನೆಯ ಸೌಲಭ್ಯಗಳ ಮಾಹಿತಿ, ಬೀಜಗಳ ಪ್ರದರ್ಶನ ಹಾಗೂ ಮಾರಾಟ, ಹೈನುಗಾರಿಕೆ ವಿಷಯದ ಮಾಹಿತಿ, ಫಲ ಪುಷ್ಪ ಪ್ರದರ್ಶನ, ಹಸು, ಎಮ್ಮೆ, ಎತ್ತುಗಳು, ವಿವಿಧ ಜಾತಿಗಳ ಶ್ವಾನಗಳ ಪ್ರದರ್ಶನ ಕೂಡ ಇರಲಿದೆ’ ಎಂದು ತಿಳಿಸಿದ್ದಾರೆ.

ಪ್ರದರ್ಶನದಲ್ಲಿ ಮಳಿಗೆ ಕಾಯ್ದಿರಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 85300 17999, 99227 12333 ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT