ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಶಾರ್ಟ್‌ ಸರ್ಕ್ಯೂಟ್‌: ಬಿಎಸ್ಎಫ್ ಯೋಧ ಸಾವು

Last Updated 31 ಆಗಸ್ಟ್ 2020, 12:26 IST
ಅಕ್ಷರ ಗಾತ್ರ

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಬಿಎಸ್ಎಫ್ ಯೋಧರೊಬ್ಬರು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಭಾನುವಾರ ಸಂಜೆ ಸಾವನಪ್ಪಿದ್ದಾರೆ.

ಈ ಕುರಿತು ಸೇನೆಯಿಂದ ಕುಟುಂಬದವರಿಗೆ ದೂರವಾಣಿ ಮೂಲಕ ಮಾಹಿತಿ ತಲುಪಿಸಲಾಗಿದೆ.

ತಾಲ್ಲೂಕಿನ ಬಸರಕೋಡದ ಗ್ರಾಮದ ಶಿವಾನಂದ ಜಗನ್ನಾಥ ಬಡಿಗೇರ (31) ಎಂಬ ಯೋಧ ಹುತಾತ್ಮರಾಗಿದ್ದು, 14 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು.

ಮೊದಲು ಬಾಂಗ್ಲಾ ಗಡಿಯಲ್ಲಿ, ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ, ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು.

ಕಳೆದ ಒಂದೂವರೆ ವರ್ಷದ ಹಿಂದೆ ತಾಳಿಕೋಟಿ ತಾಲ್ಲೂಕಿನ ತುಂಬಗಿಯ ಪುಷ್ಪಾ ಎಂಬುವರ ಜೊತೆಗೆ ಅವರ ವಿವಾಹವಾಗಿತ್ತು. ಮಗನ ಸಾವಿನ ಸುದ್ದಿ ಕೇಳಿದ ತಕ್ಷಣ ತಂದೆ, ತಾಯಿ ತೀವ್ರ ಅಸ್ವಸ್ಥರಾಗಿದ್ದಾರೆ.

ಮೃತ ಯೋಧನ ಪಾರ್ಥೀವ ಶರೀರ ಮಂಗಳವಾರ ಸಂಜೆ ಬರಲಿದೆ ಎಂದು ಸಿಪಿಐ ಆನಂದ ವಾಘಮೋಡೆ ತಿಳಿಸಿದ್ದಾರೆ.

ಶ್ರದ್ಧಾಂಜಲಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿದ್ದಾಗ ವಿದ್ಯುತ್ ತಗುಲಿ ಹುತಾತ್ಮರಾದ ಯೋಧ ಶಿವಾನಂದ ಜಗನ್ನಾಥ ಬಡಿಗೇರ ಅವರಿಗೆ ಮುದ್ದೇಬಿಹಾಳದಲ್ಲಿ ಎನ್.ಎಸ್.ಯು.ಐ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದೀಪ ಬೆಳಗಿಸಿ, ಮೌನಾಚಾರಣೆ ಮೂಲಕ ಯೋಧನಿಗೆ ಗೌರವ ಸಲ್ಲಿಸಲಾಯಿತು.

ಎನ್ ಎಸ್ ಯು ಐ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸದ್ದಾಂ ಕುಂಟೋಜಿ, ಎಪಿಎಂಸಿ ಸದಸ್ಯ ವಿಜಯಕರ್, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಹುಸೇನ್ ಮುಲ್ಲಾ, ಸಚಿನ್‌ ಪಾಟೀಲ್, ಅಬೂಬಕರ್‌ ಹಡಗಲಿ, ಹನೀಫ್ ನಾಗುರ ಮತ್ತಿತರರು ಭಾಗವಹಿಸಿದಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT