ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಮುಕ್ತ ಮತದಾರರ ಪಟ್ಟಿ: ಡಿಸಿ

Last Updated 2 ಮೇ 2022, 14:51 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ನಗರ ಮತಕ್ಷೇತ್ರದಲ್ಲಿ ನಿಖರವಾದ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಸೋಮವಾರಮನೆಮನೆ ಸಮೀಕ್ಷೆ ಮತ್ತು ಪಿಎಸ್ಇ ಪರಿಶೀಲಿಸುವ ಕಾರ್ಯದಪ್ರಗತಿ ಪರಿಶೀಲಿಸಿದರು.

ನಗರ ಮತಕ್ಷೇತ್ರದಲ್ಲಿ ಭಾಗ ಸಂಖ್ಯೆ -2 (ಕೆ.ಎಚ್.ಬಿ ಕಾಲೊನಿ) ಮತ್ತು ಭಾಗ ಸಂಖ್ಯೆ -3 (ಆದರ್ಶ ನಗರ)ರಲ್ಲಿ ಸ್ಥಳ ತನಿಖೆ ಕೈಗೊಂಡು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ನಿಖರವಾದ ಮತ್ತು ದೋಷ - ಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ವಿಜಯಪುರ ನಗರ ವ್ಯಾಪ್ತಿಯಲ್ಲಿ ನಿಖರವಾದ ಮತ್ತು ದೋಷ - ಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವುದಕ್ಕಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಮತ್ತು ಬಿಎಲ್‌ಓ ಮೇಲ್ವಿಚಾರಕರ ತರಬೇತಿಯನ್ನು ಮಾರ್ಚ್‌ 25ರಂದು ವಿಜಯಪುರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಭೆ ಜರುಗಿಸಿ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದರು.

ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ - ಮನೆ ಸಮೀಕ್ಷೆ ಕಾರ್ಯ ಮತ್ತು ಪಿಎಸ್ಇ (ಫೋಟೊ ಸಿಮಿಲರ್ ಏಂಟ್ರಿ ) ಚೆಕ್‌ಲಿಸ್ಟ್‌ಗಳನ್ನು ಪರಿಶೀಲಿಸುವ ಕಾರ್ಯ ಜರುಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT