ವಿಜಯಪುರ: ‘ಆಹಾರ ಪರಿಪೂರ್ಣವಾಗಿ ಜಗಿಯಲು ದಂತಗಳು ಗಟ್ಟಿಮುಟ್ಟಾಗಿರಬೇಕು. ಆರೋಗ್ಯದಲ್ಲಿ ದಂತಗಳ ಪಾತ್ರ ಪ್ರಮುಖ’ ಎಂದು ದಂತ ವೈದ್ಯ ಡಾ.ಸಾಗರ ಜೋಗೂರ ಹೇಳಿದರು.

ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೊಬಸ್ ಕ್ಲಬ್ ಹಿರಿಯ ನಾಗರಿಕರ ವೇದಿಕೆ ಉತ್ತರ ವಲಯದ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ‘ದಂತಗಳ ಆರೋಗ್ಯ’ ಕುರಿತ ಶಿಬಿರದಲ್ಲಿ ಮಾತನಾಡಿದ ಅವರು, ‘ಸುಂದರವಾದ ಉತ್ಕೃಷ್ಟ ಜೀವನಕ್ಕೆ ಆರೋಗ್ಯಕರ ಹಲ್ಲುಗಳು ಅವಶ್ಯಕ. ಹಲ್ಲುಗಳು ಆರೋಗ್ಯವಾಗಿರದೇ ಹೋದರೆ ಆಹಾರ ಜಗಿಯಲು ಸಾಧ್ಯವಿಲ್ಲ. ಇದರಿಂದ ಜೀರ್ಣಕ್ರಿಯೆಗೆ ವ್ಯತ್ಯಯವಾಗುತ್ತದೆ’ ಎಂದರು.

ಆರೋಗ್ಯಕರ ಹಲ್ಲುಗಳನ್ನು ಉಳಿಸಿಕೊಳ್ಳುವ ಹಲವು ವಿಧಾನಗಳನ್ನು ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು. ಹಲ್ಲು ಉಜ್ಜುವ ಕ್ರಮ, ಮೌತವಾಶ್ ಬಳಕೆ, ಹಲ್ಲುಗಳಲ್ಲಿ ಸಮಸ್ಯೆ ಬಂದಾಗ ಬಿದ್ದುಹೋದಾಗ ದಂತವೈದ್ಯರು ನೀಡುವಂತಹ ಚಿಕಿತ್ಸೆಗಳಾದ, ಸ್ವಚ್ಛ ಮಾಡುವುದು ರೂಟ್ ಕೆನಲ್ ಚಿಕಿತ್ಸೆ, ಲ್ಯಾಪಿಂಗ್, ಬ್ರಿಡಿಂಗ್ ಹಲ್ಲಿನ ಜೋಡಣೆ, ಸಿಮೆಂಟ್ ಹಾಗೂ ಬೆಳ್ಳಿ ತುಂಬುವುದು ಮುಂತಾದ ಹಲ್ಲಿನ ಚಿಕಿತ್ಸೆಗಳು ಹಾಗೂ ಅವುಗಳ ಲಾಭ-ಹಾನಿ ಕುರಿತು ಸುದೀರ್ಘವಾದ ವಿಡಿಯೊ ತುಣುಕುಗಳ ಮೂಲಕ ವಿವರಣೆ ನೀಡಿದರು.

ಜಗದೀಶ ಮೋಟಗಿ ಅಧ್ಯಕ್ಷತೆ ವಹಿಸಿದ್ದರು. ಸುಭಾಸ ಬೇಟಗೇರಿ, ಅಕ್ಕಮಹಾದೇವಿ ಬುರ್ಲಿ, ಶಿವಮೂರ್ತಿ ಹಿರೇಮಠ, ವಿ.ಸಿ. ನಾಗಠಾಣ, ಎಸ್.ಜಿ. ನಾಡಗೌಡರ, ಎಸ್.ಎಂ. ಹುಂಡೇಕಾರ, ಕೆ.ಎಸ್. ಬಿರಾದಾರ, ಎಚ್.ಬಿ. ಪಾಟೀಲ, ಬಿ.ಐ. ಜೋಗುರ, ಡಿ.ಆರ್. ಪಾಟೀಲ, ಈಶ್ವರಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.