ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಮತ್ತೆ ಭೂಕಂಪ: 2.5 ತೀವ್ರತೆ ದಾಖಲು

Last Updated 8 ಅಕ್ಟೋಬರ್ 2021, 8:34 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ನಗರದಲ್ಲಿ ಗುರುವಾರ ತಡರಾತ್ರಿ 12.06 ನಿಮಿಷದಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ.

ವಿಜಯಪುರ ನಗರದಿಂದ 1.7 ಕಿ.ಮೀ. ದೂರದಲ್ಲಿರುವ ಬರಟಗಿ ಭೂಕಂಪದ ಕೇಂದ್ರ ಬಿಂದುವಾಗಿದೆ. 8 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ.

ವಿಜಯಪುರ ನಗರ, ಭೂತನಾಳ ತಾಂಡ, ಅಲಿಯಾಬಾದ್‌ ಮತ್ತು ಹಂಚಿನಾಳ ವ್ಯಾಪ್ತಿಯಲ್ಲೂ ಭೂಕಂಪದ ಅನುಭವ ಆಗಿದೆ. ಭೂಮಿ ಒಳಗಿಂದ ಸಿಡಿಲು–ಗುಡುಗಿನ ಆರ್ಭಟದಂತೆ ಶಬ್ಧ ಕೇಳಿಬಂದಿದೆ. ಭಯ ಭೀತರಾದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಬಹಳಷ್ಟು ಜನರ ರಾತ್ರಿ ಇಡೀ ನಿದ್ರೆ ಬಿಟ್ಟು, ಮನೆ ಹೊರಗೆ ಕಾಲ ಕಳೆದಿದ್ದಾರೆ.

ಭೂಕಂಪದ ಅನುಭವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಗೋಳಗುಮ್ಮಟ ಸಮೀಪದ ನಿವಾಸಿ, ವಕೀಲ ಕೆ.ಎಸ್‌. ಅಂಕಲಗಿ, ಬಹಳ ದಿನಗಳಿಂದ ಆಗಾಗ ಭೂಮಿ ಒಳಗಿಂದ ಶಬ್ಧ ಕೇಳಿಬರುತ್ತಿದೆ. ಆದರೆ, ಇದು ಭೂಕಂಪವಲ್ಲ. ಜಿಲ್ಲೆಯಲ್ಲಿ ಗಣಿಗಾರಿಕೆ ಮಿತಿಮೀರಿದ್ದು, ಇದರಿಂದ ಭೂಮಿ ಒಳಗಿನ ಶಿಲಾಪದರ ಬೃಹತ್‌ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಸಮೀಪದಲ್ಲೇ ಇರುವ ಆಲಮಟ್ಟಿ ಜಲಾಶಯದ ನೀರು ಈ ಬಿರುಕಿನೊಳಗೆ ನುಸುಳುವಾಗ ಶಬ್ಧ ಹೊಮ್ಮುತ್ತಿದೆ. ಭೂಕಂಪದ ಅನುಭವಾಗುತ್ತದೆ. ಭವಿಷ್ಯದಲ್ಲಿ ದೊಡ್ಡಮಟ್ಟದ ಅಪಾಯವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT