ವಿಜಯಪುರ: ವಿಮಾನ ನಿಲ್ದಾಣಕ್ಕೆ ಸಿದ್ಧೇಶ್ವರ ಶ್ರೀ ಹೆಸರು: ಎಚ್‌ಡಿಕೆ ಸಲಹೆ

ವಿಜಯಪುರ: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರನ್ನು ನಾಮಕರಣ ಮಾಡಿದರೆ ಆ ನಿಲ್ದಾಣಕ್ಕೆ ಶೋಭೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಜ್ಞಾನಯೋಗಾಶ್ರಮಕ್ಕೆ ಶುಕ್ರವಾರ ಭೇಟಿ ನೀಡಿ, ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಇಲ್ಲಿಗೆ ಭೇಟಿ ನೀಡಿದ್ದು ನನ್ನ ಬದುಕಿನ ಪಾವನ ಕ್ಷಣ, ಶ್ರೀಗಳು ತೋರಿದ ಮಾರ್ಗದಲ್ಲಿ ನಾವು ನಡೆಯಬೇಕು, ಇಂತಹ ಸಂತರು ಮತ್ತೆ ಹುಟ್ಟುವುದು ಕಷ್ಟ, ಅವರು ನಡೆದಾಡಿದ ಈ ಪುಣ್ಯನೆಲದಲ್ಲಿ ನಾನು ನಿಂತಿದ್ದೇನೆ. ಇದು ನನ್ನ ಪಾಲಿನ ಧನ್ಯತೆ ಎಂದರು.
ಶ್ರೀಗಳ ಪ್ರವಚನ, ಸಂದೇಶಗಳನ್ನು ಕುಮಾರಸ್ವಾಮಿ ಸ್ಮರಿಸಿದರು.
ಶಾಸಕ ದೇವಾನಂದ ಚವ್ಹಾಣ, ಡಾ.ಸುನೀತಾ ಚವ್ಹಾಣ, ಆಶ್ರಮದ ಸ್ವಾಮೀಜಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.