ಸಿಂದಗಿ: ‘12ನೆಯ ಶತಮಾನದ ಶರಣ ಚಳವಳಿಯಲ್ಲಿ ಸೊನ್ನಲಗಿಯ ಸಿದ್ಧರಾಮರ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿದೆ. ಅವರು ಭಕ್ತಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಸಮನ್ವಯಗೊಳಿಸಿ ವಚನಗಳನ್ನು ರಚಿಸಿದ್ದಾರೆ’ ಎಂದು ಬರಹಗಾರ ಅಶೋಕ ಬಿರಾದಾರ ಹೇಳಿದರು.

ನಗರದ ಪದ್ಮರಾಜ ಬಿ.ಇಡಿ ಕಾಲೇಜಿನಲ್ಲಿ ಬುಧವಾರ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಶಾಖೆಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೊನ್ನಲಗಿ ಸಿದ್ಧರಾಮರ ಜೀವನ ಮತ್ತು ಚಿಂತನೆಗಳು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

‘ಸಿದ್ಧರಾಮರು ವಚನಗಳ ಮೂಲಕ ಜನಸಾಮಾನ್ಯರಿಗೆ ಅಧ್ಯಾತ್ಮಿಕ ಜಾಗೃತಿ ಮೂಡಿಸಿದ್ದಾರೆ. ಸಮಾಜದಲ್ಲಿನ ಅಸಮಾನತೆ, ಅಂಧಶ್ರದ್ಧೆ ಮತ್ತು ಜಾತಿಭೇದಗಳ ವಿರುದ್ಧ ಧ್ವನಿ ಎತ್ತಿದ ಮಹಿಮಾಪುರುಷರು. ಕಾಯಕ, ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು’ ಎಂದು ತಿಳಿಸಿದರು.

ಕಾಲಜ್ಞಾನಿ ಕೊಡೇಕಲ್ ಬಸವಣ್ಣ ವಿಷಯ ಕುರಿತು ಆರ್.ಡಿ.ಪಾಟೀಲ ಪಿಯು ಕಾಲೇಜು ಕನ್ನಡ ವಿಷಯದ ಉಪನ್ಯಾಸಕ ಪಿ.ಬಿ.ಮಹಲಿನಮಠ ಉಪನ್ಯಾಸ ನೀಡಿ, ‘ಕೊಡೇಕಲ್ ಬಸವಣ್ಣ ಕಾಲಜ್ಞಾನವನ್ನು ಇಡೀ ಜಗತ್ತಿಗೆ ಬಿತ್ತರಿಸಿ ಸಮಾನತೆಯ ದಾರಿಯನ್ನು ತೋರಿದ ಮಹಾನ್ ಜ್ಞಾನಿ’ ಎಂದು ತಿಳಿಸಿದರು.

;ಕೊಡೇಕಲ್ ಬಸವಣ್ಣ ಕೇವಲ ಕಾಲಜ್ಞಾನಿ ಮಾತ್ರವಲ್ಲದೇ ಸಾಮಾಜಿಕ ಪರಿವರ್ತನೆಗೆ ಧಿಕ್ಕು ತೋರಿದ ಧೀಮಂತ ಸಮಾಜ ಸುಧಾರಕ’ ಎಂದರು.

ಪರಿಷತ್ತಿನ ತಾಲ್ಲೂಕು ಶಾಖೆ ಅಧ್ಯಕ್ಷ ಶರಣಬಸವ ಜೋಗೂರ ಮಾತನಾಡಿ, ‘ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳು ಶರಣರ ಬದುಕಿನ ಮೌಲ್ಯಗಳನ್ನು ಅರಿಯುವ ವೇದಿಕೆಯಾಗಿದೆ. ಶಿಕ್ಷಕರು ಶರಣರ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಚನ ಸಾಹಿತ್ಯದ ಅಧ್ಯಯನದ ಮೂಲಕ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬೇಕು’ ಎಂದರು.

ಉಪನ್ಯಾಸ ಸುಧಾಕರ ಚವ್ಹಾಣ, ಬ್ಯಾಂಕ್ ನಿವೃತ್ತ ಅಧಿಕಾರಿ ವೀರೇಶ ಇವಣಿ, ಸುಜಾತಾ ಕಿಣಗಿ, ಪ್ರಸನ್ನ ಜೋಗೂರ, ಪ್ರಶಾಂತ ಕುಲಕರ್ಣಿ, ಚನ್ನೂ ಕತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.