ತಾಳಿಕೋಟೆ: ಪಟ್ಟಣದ ಅಂಚೆಕಚೇರಿಯ ರೂಟರ್ ಸುಟ್ಟು ಹೋಗಿ ಕಳೆದ 19 ದಿನಗಳಿಂದ ನಿಂತು ಹೋಗಿದ್ದ ಆನ್ ಲೈನ್ ಸೇವೆಗಳು ಶುಕ್ರವಾರ ಒಂದೊಂದಾಗಿ ಮರುಜೀವ ಪಡೆದವು.

ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿರುವ ತಾಲ್ಲೂಕಿನ ಬಳಗಾನೂರ ಬಳಿ ಏಪ್ರಿಲ್ 28 ರಂದು ಭಾರಿ ಪ್ರಮಾಣದ ಸಿಡಿಲೊಂದು ನೆಲಕ್ಕಪ್ಪಳಿಸಿತ್ತು. ಸಿಡಿಲಿನ ಪ್ರತಾಪಕ್ಕೆ ಪಟ್ಟಣದಲ್ಲಿರುವ ಅಂಚೆ ಕಚೇರಿಯ ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ ರೂಟರ್ ಕೂಡ ಸುಟ್ಟು ಹೋಗಿದೆ.

ಇದರಿಂದಾಗಿ ಆನ್ ಲೈನ್ ಮೂಲಕ ದೊರೆಯುತ್ತಿದ್ದ, ಎಸ್.ಬಿ., ಆರ್.ಡಿ, ಪಿಎಲ್.ಐ, ಸುಕನ್ಯಾ ಯೋಜನೆಗಳು ಸ್ಥಗಿತವಾಗಿ ಗ್ರಾಹಕರ ಹಣ ತುಂಬಲು ಹಾಗೂ ತೆಗೆಯಲು ಆಗದೇ ಪರದಾಡುವಂತಾಗಿತ್ತು. ಇದರೊಂದಿಗೆ ಇದರ ಸಂಪರ್ಕ ಜಾಲದಲ್ಲಿರುವ 17 ಗ್ರಾಮಗಳ ಅಂಚೆ ಸೇವೆಯಲ್ಲೂ ವ್ಯತ್ಯಯವಾಗಿತ್ತು. ಅಲ್ಲೂ ಗ್ರಾಹಕ ಹಣ ಪಡೆಯುವ ತುಂಬುವ ವ್ಯವಸ್ಥೆ ನಿಂತುಹೋಗಿದ್ದರಿಂದ ನಿತ್ಯ ನೂರಾರು ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಸಿಬ್ಬಂದಿ ಕೂಡ ಪರದಾಡಿದ್ದರು. ಬಂದವರಿಗೆ ಉತ್ತರ ಹೇಳಿ ಹೇಳಿ ಸುಸ್ತಾಗಿದ್ದರೆ, ಗ್ರಾಹಕರು ಇಂದು ನಾಳೆ ಎಂದು ಅಲೆದು ಅಲೆದು ಸುಸ್ತಾದರು.

ರಿಜಿಸ್ಟರ್ ಪೋಸ್ಟ್, ಸ್ಪೀಡ್ಪೋಸ್ಟ್ ಮತ್ತು ಪಾರ್ಸೆಲ್ ಸೇವೆಗಳಿಗೆ ಮಾತ್ರ ಅವಕಾಶವಾಗಿದ್ದರಿಂದ ತಿಂಗಳ ವಾಯಿದೆಯೊಳಗೆ ಹಣ ಪಾವತಿಸಬೇಕಿದ್ದ ಆರ್.ಡಿ, ಪಿಎಲ್ಐ ಹಾಗೂ ಸುಕನ್ಯಾ ಯೋಜನೆಯಯವರು ದಂಡದ ಹಣ ಕಟ್ಟುವುದು ಬರುತ್ತದೆಯೋ ಎಂಬ ಆತಂಕದಲ್ಲಿದ್ದರು.

ವಿಜಯಪುರ ಜಿಲ್ಲಾ ಕಚೇರಿಯಿಂದ ಮೇ 3ರಂದು ಹೊಸ ರೂಟರ್ ವ್ಯವಸ್ಥೆ ಮಾಡಲಾಗಿತ್ತು. ಆನ್ ಲೈನ್ ಸೇವೆಗೆ ಮರುಜೀವ ತುಂಬಲು ಕಳೆದ ಒಂದು ವಾರದಿಂದ ಬಿಎಸ್ಎನ್.ಎಲ್ ಜೆಟಿಓ ಪ್ರಶಾಂತ ಅವರ ಪ್ರಯತ್ನ ಮುಂದುವರೆದಿತ್ತು. ಆದರೆ ಸಿಸ್ಟಂ ನಲ್ಲಿರುವುದು ಹಳೆಯ ಡಾಟಾಗಳು ಹೊಸದಕ್ಕೆ ಹೊಂದಾಣಿಕೆಯಾಗದ್ದರಿಂದ ಆನ್ ಲೈನ್ ಸೇವೆ ಪ್ರಾರಂಭವಾಗದೆ ಇರುವುದಕ್ಕೆ ಕಾರಣವಾಗಿತ್ತು.

‘ಶುಕ್ರವಾರದಿಂದ ಒಂದು ಲೈನ್ ಬರುವಂತೆ ಮಾಡಿದ್ದೇವೆ. ಶನಿವಾರಕ್ಕೆ ಎಲ್ಲವೂ ಸುಗಮವಾಗಿ ಪ್ರಾರಂಭವಾಗಲಿವೆ’ ಎಂಬ ಭರವಸೆಯನ್ನು ಜೆಟಿಓ ನೀಡಿದರು. ಇತ್ತ ಕಚೇರಿ ಮುಖ್ಯಸ್ಥೆ ಜಯಶ್ರೀ ಬಿರಾದಾರ ಅವರು ಬೆಂಗಳೂರಿನ ತಾಂತ್ರಿಕ ಸಿಬ್ಬಂದಿಯೊಂದಿಗೆ ಮೊಬೈಲ್ ವಿಡಿಯೋ ಕಾಲ್ ಮೂಲಕ ಕಚೇರಿಯ ಒಂದೊಂದೇ ಗಣಕಯಂತ್ರಗಳ ಮರುಸಂಪರ್ಕದ ಪ್ರಯತ್ನ ನಡೆಸಿದ್ದರು.

‘ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಅಂಚೆ ಕಚೇರಿಯು ಉತ್ತಮ ಸೇವೆಗೆ ಹೆಸರಾಗಿದೆ. ಸೇವೆ ಸ್ಥಗಿತವಾಗುವ ಇಂತಹ ಘಟನೆಗಳು ಎದುರಾಗದಂತೆ ಎಚ್ಚರಿಕೆ ಕ್ರಮಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ನಿತ್ಯ ನೂರಾರು ಗ್ರಾಹಕರು ಪರಿಪಾಟಲು ಅನುಭವಿಸಬೇಕಾಗುತ್ತದೆ’ ಎಂದು ಗ್ರಾಹಕ ವೀರೇಶ ಕೋರಿ ತಿಳಿಸಿದರು.ಅಂಚೆ ಕಚೇರಿಗೆ ಅರ್ಥಿಂಗ್ ಇಲ್ಲ ತಕ್ಷಣ ಅದನ್ನು ಮಾಡಿಸಬೇಕು. ಸಿಡಿಲಿನ ಅಘಾತಕ್ಕೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತವೆ –ಪ್ರಶಾಂತ ಜೆಟಿಓ ಬಿಎಸ್.ಎನ್.ಎಲ್. ಕಚೇರಿ ತಾಳಿಕೋಟೆ

ಅಂಚೆ ಕಚೇರಿಗೆ ಅರ್ಥಿಂಗ್ ಇಲ್ಲ ತಕ್ಷಣ ಅದನ್ನು ಮಾಡಿಸಬೇಕು. ಸಿಡಿಲಿನ ಅಘಾತಕ್ಕೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತವೆ
–ಪ್ರಶಾಂತ ಜೆಟಿಓ ಬಿಎಸ್.ಎನ್.ಎಲ್. ಕಚೇರಿ ತಾಳಿಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.